ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಟೀಂ ಇಂಡಿಯಾಕ್ಕೆ ಧೋನಿ ಸಮರ್ಥ ಸಾರಥಿ: ರಾಹುಲ್ ದ್ರಾವಿಡ್

ಭಾರತ ಕ್ರಿಕೆಟ್ ತಂಡ ನಾಯಕ ಮಹೇಂದ್ರ...

Vishwanath S
Updated On : 17 Jul 2014, 1:44 am

ನವದೆಹಲಿ: ಭಾರತ ಕ್ರಿಕೆಟ್ ತಂಡ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಸಾರಥ್ಯದಲ್ಲಿ ಅತ್ಯುತ್ತಮವಾಗಿ ಸಾಗುತ್ತಿದ್ದು, ಇತ್ತೀಚೆಗೆ ಆಸೀಸ್ ಮಾಜಿ ನಾಯಕ ಇಯಾನ್ ಚಾಪೆಲ್ ಹೆಳಿದಂತೆ ಭಾರತ ತಂಡದ ನಾಯಕತ್ವದಲ್ಲಿ ಬದಲಾವಣೆ ಬೇಕಿಲ್ಲ ಎಂದು ಮಾಜಿ ನಾಯಕ ರಾಹುಲ್ ದ್ರಾವಿಡ್ ಹೇಳಿದ್ದಾರೆ.  ಧೋನಿ ನಾಯಕತ್ವದಲ್ಲಿ ಭಾರತ ತಂಡ ಉತ್ತಮ ಹಾದಿಯಲ್ಲಿ ಸಾಗುತ್ತಿದೆ. ಪ್ರಸ್ತುತ ಸಂದರ್ಭದಲ್ಲಿ ಧೋನಿ ಭಾರತಕ್ಕೆ ಸಮರ್ಥ ನಾಯಕನಾಗಿದ್ದಾರೆ. ಸಾಕಷ್ಟು ಜನ ಭಾರತ ತಂಡ ಕಳೆದ ಬಾರಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾದಲ್ಲಿನ ಸೋಲಿನ ಬಗ್ಗೆಯೇ ಮಾತನಾಡುತ್ತಿದ್ದಾರೆ. ಈಗ ಧೋನಿ ತಂಡದಲ್ಲಿ ಯುವ ಆಟಗಾರರನ್ನು ಹೊಂದಿದ್ದು, ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ವಿರಾಟ್ ಕೊಹ್ಲಿಗೆ ನಾಯಕತ್ವ ನೀಡಲು ಸಾಕಷ್ಟು ಸಮಯಾವಕಾಶವಿದೆ. ಆ ಸಮಯ ಮುಂದಿನ ದಿನಗಳಲ್ಲಿ ಬರಲಿದೆ ಎಂದು ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.
ಸ್ಟುವರ್ಟ್ ಬಿನ್ನಿ ತಾವು ಅಂತಾರಾಷ್ಟ್ರೀಯ ಮಟ್ಟದ ಆಟಗಾರ ಎಂಬುದನ್ನು ಸಾಬೀತು ಮಾಡಿದ್ದಾರೆ. ಕೆಲವುರು ಬಿನ್ನಿ ಉತ್ತಮವಾಗಿ ಬೌಲಿಂಗ್ ಮಾಡಲಿಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಏಕೆಂದರೆ ಪಿಚ್ ಬಿನ್ನಿಗೆ ಸೂಕ್ತವಾಗಿರಲಿಲ್ಲ. ನನ್ನ ಪ್ರಕಾರ ಲಾರ್ಡ್ಸ್‌ನಲ್ಲಿ ಬಿನ್ನಿ ಉತ್ತಮ ಅವಕಾಶ ಪಡೆಯಲಿದ್ದಾರೆ ಎಂದು ದ್ರಾವಿಡ್ ವಿಶ್ವಾಸ ವ್ಯಕ್ತಪಡಿಸಿದರು.
ಲಾರ್ಡ್ಸ್‌ನಲ್ಲಿ ಭಾರತ ವಿಭಿನ್ನ ಸವಾಲನ್ನು ಎದುರಿಸಬೇಕಾಗುತ್ತದೆ. ಈ ಪಿಚ್‌ನಲ್ಲಿ ಬೌಲರ್‌ಗಳ ಪಾತ್ರ ಮಹತ್ವದ್ದಾಗಿರುತ್ತದೆ. ಹಾಗಾಗಿ ಕುತೂಹಲದಿಂದ ಪಂದ್ಯವನ್ನು ನಿರೀಕ್ಷಿಸುತ್ತಿದ್ದೇನೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement