ಜೆಕ್ ಗಣರಾಜ್ಯ, ಚೀನಾಕ್ಕೆ ಭಾರತ ಫುಟ್ಬಾಲ್ ತಂಡ
ನವದೆಹಲಿ: ಇಪ್ಪತ್ಮೂರು ವರ್ಷದೊಳಗಿನ ಪುರುಷರ ಫುಟ್ಬಾಲ್ ತಂಡ ಜೆಕ್ ಗಣರಾಜ್ಯ ಮತ್ತು ಚೀನಾ ಪ್ರವಾಸಕ್ಕೆ ತೆರಳಲಿದೆ.
ಸೆಪ್ಟೆಂಬರ್ 19ರಿಂದ ಅಕ್ಟೋಬರ್ 4ರವರೆಗೆ ಇಂಚೆಯಾನ್ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ಗೂ ಮುನ್ನ ಇದು ಭಾರತ ತಂಡದ ವಿದೇಶಿ ಪ್ರವಾಸವಾಗಿದೆ.
ಈ ಪ್ರವಾಸದ ಹಿನ್ನೆಲೆಯಲ್ಲಿ 30 ಸಂಭಾವ್ಯ ಆಟಗಾರರ ತಂಡ ಬೆಂಗಳೂರಿನಲ್ಲಿ ಕೋಚ್ ವಿಮ್ ಕೋವರ್ಮನ್ಸ್ ಗರಡಿಯಲ್ಲಿ ಜುಲೈ 1ರಿಂದ ತರಬೇತಿ ಪಡೆಯುತ್ತಿದ್ದಾರೆ.
25 ಸದಸ್ಯರ ತಂಡ ಜುಲೈ 21ರಂದು ಜೆಕ್ ಗಣರಾಜ್ಯಕ್ಕೆ ತೆರಳಲಿದ್ದು ಆಗಸ್ಟ್ 8ಕ್ಕೆ ವಾಪಸ್ ಬರಲಿದೆ. ಅಲ್ಲಿ ಭಾರತ ಮೂರು ಕ್ಲಬ್ಗಳ ಎದುರು ಮೂರು ಪಂದ್ಯಗಳನ್ನಾಡಲಿದೆ. ನಂತರ ಆಗಸ್ಟ್ 25ರಿಂದ ಸೆಪ್ಟೆಂಬರ್ 8ರವರೆಗೆ ಚೀನಾಕ್ಕೆ ತೆರಳಲಿದೆ.