ಮಹೀಂದ್ರ ಮಾನ್ಸೂನ್ ರ್ಯಾಲಿಗೆ 25 ವಾಹನ
ಬೆಂಗಳೂರು: ಮಹೀಂದ್ರಾ ಅಡ್ವೆಂಚರ್ ಮಾನ್ಸೂನ್ ಚಾಲೆಂಜ್ 2014ರ ರ್ಯಾಲಿಯಲ್ಲಿ ಈ ಬಾರಿ 25 ವಾಹನಗಳು ಭಾಗವಹಿಸಲಿವೆ. ವಾರಾಂತ್ಯದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ರ್ಯಾಲಿ 700 ಕಿ.ಮೀ ಸಾಗಲಿದೆ.
ಸಿಯೆಟ್ ಟೈರ್ಸ್ ಸಂಸ್ಥೆಯ ಸಹಯೋಗದಲ್ಲಿ ನಡೆಯಲಿರು ರ್ಯಾಲಿಗೆ ಮಹೀಂದ್ರ ಮತ್ತು ಮಹೀಂದ್ರ ರು. 3.5 ಲಕ್ಷ ಬಹುಮಾನ ಘೋಷಿಸಿದೆ. ಶನಿವಾರ ಬೆಳಗ್ಗೆ ಬೆಂಗಳೂರಿನಿಂದ ಆರಂಭವಾಗುವ ರ್ಯಾಲಿ, ಶಿವಮೊಗ್ಗದಲ್ಲಿ ಬೀಡು ಬಿಡಲಿದ್ದು, ಪಶ್ಚಿಮ ಘಟ್ಟದ ಮೂಲಕ ಮಂಗಳೂರು ತಲುಪಲಿದೆ.
ಮಳೆಗಾಲವಾಗಿರುವ ಹಿನ್ನೆಲೆಯಲ್ಲಿ ದಾರಿಯುದ್ದಕ್ಕೂ ರ್ಯಾಲಿ ಅನೇಕ ಸವಾಲುಗಳನ್ನು ಎದುರಿಸಲಿದೆ. ಮೂರು ವರ್ಷಗಳ ಹಿಂದೆಯೇ ಆರಂಭವಾಗಿರುವ ರ್ಯಾಲಿಗೆ ಇದು ನಾಲ್ಕನೇ ಆವೃತ್ತಿಯಾಗಿದೆ. 'ದೊಡ್ಡ ಮೊತ್ತದ ಪ್ರಶಸ್ತಿಯ ರ್ಯಾಲಿಗಳಲ್ಲೊಂದಾಗಿರುವ ಇದು, ಮುಂಗಾರಿನ ವೈಚಿತ್ರಗಳನ್ನು ಸಂಭ್ರಮಿಸುವುದಾಗಿದೆ' ಎಂದು ಮಹೀಂದ್ರ ಮಹೀಂದ್ರ ಮಾರುಕಟ್ಟೆ ಅಧಿಕಾರಿ ನಾಯರ್ ತಿಳಿಸಿದ್ದಾರೆ.