ಇಂಗ್ಲೆಂಡ್ ಬ್ಯಾಲೆನ್ಸ್
ಭಾರತದ ಮಧ್ಯಮ ವೇಗಿ ಭುವನೇಶ್ವರ್ ಕುಮಾರ್ ಶಿಸ್ತಿನ ದಾಳಿ ಸಂಘಟಿಸುವ ಮೂಲಕ ಎರಡನೇ...
ಲಾರ್ಡ್ಸ್: ಭಾರತದ ಮಧ್ಯಮ ವೇಗಿ ಭುವನೇಶ್ವರ್ ಕುಮಾರ್ ಶಿಸ್ತಿನ ದಾಳಿ ಸಂಘಟಿಸುವ ಮೂಲಕ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೂ ಸಹ ಇಂಗ್ಲೆಂಡ್ ತಂಡ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಗ್ಯಾರಿ ಬ್ಯಾಲೆನ್ಸ್ ಅವರ ಶತಕದ ನೆರವಿನಿಂದ ಮೈಕೊಡವಿ ಮೇಲೇಳುವ ಪ್ರಯತ್ನ್ನ ನಡೆಸಿದೆ.
ಪ್ರತಿಷ್ಠಿತ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಶುಕ್ರವಾರ ಎರಡನೇ ದಿನದಾಟ ಅಂತ್ಯಕ್ಕೆ ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್ನಲ್ಲಿ 6 ವಿಕೆಟ್ ಕಳೆದುಕೊಂಡು 219 ರನ್ಗಳಿಸಿತ್ತು.
ಇದಕ್ಕು ಮುನ್ನ ಭಾರತ ತಂಡ 295 ರನ್ಗಳ ಸಾಧಾರಣ ಮೊತ್ತದೊಂದಿಗೆ ತನ್ನ ಮೊದಲ ಇನಿಂಗ್ಸ್ಗೆ ತೆರೆ ಎಳೆದುಕೊಂಡಿತು. ಮೊದಲ ದಿನದಾಂತ್ಯಕ್ಕೆ 9 ವಿಕೆಟ್ಗೆ 290 ರನ್ಗಳಿಸಿದ್ದ ಭಾರತ, ಎರಡನೇ ದಿನದಾಟ ಮುಂದುವರಿಸಿ ಮತ್ತೆ ಖಾತೆಗೆ ಕೇವಲ 5 ರನ್ ಸೇರಿಸುವಷ್ಟರಲ್ಲಿ ತನ್ನ ಕೊನೆಯ ವಿಕೆಟ್ ಆಗಿ ಮೊಹಮ್ಮದ್ ಶಮಿ ಅವರನ್ನು ಕಳೆದುಕೊಂಡಿತು.
ಎರಡನೇ ದಿನ ಬೆಳಗ್ಗೆ ಕೇವಲ 1.4 ಓವರುಗಳ ಆಟದಲ್ಲೇ ಭಾರತದ ಕೊನೆಯ ವಿಕೆಟ್ ಉರುಳಿಸಿ ತಮ್ಮ ಸರದಿ ಆರಂಭಿಸಿದ ಆಂಗ್ಲರಿಗೆ ಉತ್ತಮ ಆರಂಭ ದೊರೆಯಲಿಲ್ಲ. ಬೃಹತ್ ಇನಿಂಗ್ಸ್ ಕಟ್ಟಲು ವಿಫಲರಾದ ಆರಂಭಿಕ ಆಟಗಾರರಾದ ನಾಯಕ ಅಲಸ್ಟೇರ್ ಕುಕ್ ಮತ್ತು ಸ್ಯಾಮ್ ರಾಬ್ಸನ್ ತಂಡದ ಮೊತ್ತ ಕೇವಲ 31 ರನ್ಗಳಾಗುವಷ್ಟರಲ್ಲಿ ಒಬ್ಬರ ಹಿಂದೆ ಒಬ್ಬರು ಪೆವಿಲಿಯನ್ ಸೇರಿದರು.
ಬಳಿಕ ಮಧ್ಯಮ ಹಂತದಲ್ಲಿ ಇಯಾನ್ ಬೆಲ್ ಮತ್ತು ಜೋ ರೂಟ್ ಸಹ ಬೇಗನೆ ವಿಕೆಟ್ ಕೈಚೆಲ್ಲಿದಾಗ ಆತಿಥೇಯ ಇಂಗ್ಲೆಂಡ್ ಒತ್ತಡಕ್ಕೆ ಸಿಲುಕಿತು. ಈ ವೇಳೆ ಮೂರನೇ ಕ್ರಮಾಂಕದಲ್ಲಿ ಆಡಲಿಳಿದಿರುವ ಗ್ಯಾರಿ ಬ್ಯಾಲೆನ್ಸ್ (110 ರನ್, 203 ಎಸೆತ, 15 ಬೌಂಡರಿ) ಶತಕ ಪೂರೈಸಿ ಮುಂದೆ ಸಾಗುವ ಮೂಲಕ ಇಂಗ್ಲೆಂಡ್ ಪಾಳಯದಲ್ಲಿ ಆಸೆ ಚಿಗುರುವಂತೆ ಮಾಡಿದ್ದಾರೆ.
ಈ ಮಧ್ಯೆ ಭಾರತದ ಪರ ಉತ್ತಮ ದಾಳಿ ಸಂಘಟಿಸಿದ ಭುವನೇಶ್ವರ್ ಕುಮಾರ್ 4 ವಿಕೆಟ್ ಉರುಳಿಸಿ ಆಂಗ್ಲರ ಪಾಳಯದಲ್ಲಿ ನಡುಕ ಹುಟ್ಟಿಸಿದರು.
ಜಡೇಜಾ ಹಾಗೂ ಮುರಳಿ ವಿಜಯ್ ಕ್ರಮವಾಗಿ ಒಂದು ವಿಕೆಟ್ ಉರುಳಿಸಿ ಆತಿಥೇಯರ ಮೇಲೆ ಒತ್ತಡ ಹೇರಿದ್ದಾರೆ. ಭಾರತದ ಗಡಿ ದಾಟಲು ಇಂಗ್ಲೆಂಡ್ಗೆ ಇನ್ನೂ 76 ರನ್ಗಳ ಅಗತ್ಯವಿದ್ದು, ಪ್ಲಂಕೆಟ್ ಹಾಗೂ ಪ್ರಯರ್ ಕ್ರೀಸ್ನಲ್ಲಿದ್ದು ಮೂರನೇ ದಿನಕ್ಕೆ ಆಟ ಕಾಯ್ದಿರಿಸಿದ್ದಾರೆ.
ಸ್ಕೋರ್ ವಿವರ
ಭಾರತ ಮೊದಲ ಇನಿಂಗ್ಸ್ 91.4 ಓವರುಗಳಲ್ಲಿ 295
(ಮೊದಲ ದಿನ 9ಕ್ಕೆ290ರಿಂದ ಮುಂದುವರಿದಿದೆ)
ಮೊಹಮ್ಮದ್ ಶಮಿ ಸಿ ಕುಕ್ ಬಿ ಸ್ಟೋಕ್ಸ್ 19 , ಇಶಾಂತ್ ಶರ್ಮಾ ಅಜೇಯ 12. ಇತರೆ: (ಬೈ-17, ಲೆಗ್ಬೈ-10, ನೋಬಾಲ್-1) 28.
ವಿಕೆಟ್ ಪತನ: 1-11, 2-48, 3-86, 4-113, 5-123, 6-128, 7-145, 8-235, 9-275, 10-295.
ಬೌಲಿಂಗ್ ವಿವರ: ಆ್ಯಂಡರ್ಸನ್ 23-7-60-4, ಬ್ರಾಡ್ 22-5-79-2, ಪ್ಲಂಕೆಟ್ 15-5-51-1, ಸ್ಟೋಕ್ಸ್ 17.4-5-40-2, ಅಲಿ 14-2-38-1.
ಇಂಗ್ಲೆಂಡ್ ಮೊದಲ ಇನಿಂಗ್ಸ್ 53 ಓವರುಗಳಲ್ಲಿ 219ಕ್ಕೆ6
ಕುಕ್ ಸಿ ಧೋನಿ ಬಿ ಭುವನೇಶ್ವರ್ 10, ರಾಬ್ಸನ್ ಸಿ ಧೋನಿ ಬಿ ಭುವನೇಶ್ವರ್ 17, ಬ್ಯಾಲೆನ್ಸ್ ಸಿ ಧೋನಿ ಬಿ ಭುವನೇಶ್ವರ್ 110, ಇಯಾನ್ ಬೆಲ್ ಸಿ ಜಡೇಜಾ ಬಿ ಭುವನೇಶ್ವರ್ 16, ರೂಟ್ ಎಲ್ಬಿ ಬಿ ಜಡೇಜಾ 13, ಮೊಯೀನ್ ಎಲ್ಬಿ ಬಿ ವಿಜಯ್ 32, ಪ್ಲಂಕೆಟ್ ಬ್ಯಾಟಿಂಗ್ 4, ಪ್ರಯರ್ ಬ್ಯಾಟಿಂಗ್ 2. ಇತರೆ: (ಬೈ-1, ಲೆಗ್ಬೈ-9, ವೈ-2, ನೋಬಾಲ್-3) 15.
ವಿಕೆಟ್ ಪತನ: 1-22, 2-31, 3-70, 4-113.
ಬೌಲಿಂಗ್ ವಿವರ: ಭುವನೇಶ್ವರ್ 23-9-46-4, ಶಮಿ 15-5-33-0, ಇಶಾಂತ್ 15-5-32-0, ಬಿನ್ನಿ 10-0-45-0, ಜಡೇಜಾ 18-1-41-1, ವಿಜಯ್ 3-0-12-1.