ಜಡೇಜಾ-ಜೇಮ್ಸ್ ಪ್ರಕರಣ ಶ್ರೀನಿಗೆ ಜಟಿಲ
ಭಾರತ, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾಕ್ಕೆ ಅಗ್ರಸ್ಥಾನ ನೀಡಲಾಗಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ನಾಯಕತ್ವವನ್ನು ಈಗ ಶ್ರೀನಿವಾಸನ್ ವಹಿಸಿಕೊಂಡಿದ್ದಾರೆ.ಈಗಷ್ಟೇ ಅಧಿಕಾರ ವಹಿಸಿಕೊಂಡಿರುವ ಶ್ರೀನಿವಾಸನ್ಗೆ, ಭಾರತದ ಆಲ್ರೌಂಡರ್ ರವೀಂದ್ರ ಜಡೇಜಾ ಮತ್ತು ಇಂಗ್ಲೆಂಡ್ನ ಬೌಲರ್ ಜೇಮ್ಸ್ ಆ್ಯಂಡರ್ಸನ್ ಮಾತಿನ ಚಕಮಕಿಯ ಪ್ರಕರಣ ಜಠಿಲವಾಗಿ ಪರಿಣಮಿಸಿದೆ.
ಮೊದಲ ಟೆಸ್ಟ್ ಪಂದ್ಯದ ಸಂದರ್ಭ ಜೇಮ್ಸ್ ಆ್ಯಂಡರ್ಸನ್ ಅವರು ರವೀಂದ್ರ ಜಡೇಜಾ ಅವರಿಗೆ ಛೇಡಿಸಿದ್ದರು ಎನ್ನಲಾಗಿದೆ. ಹೀಗಾಗಿ, ಐಸಿಸಿಯಲ್ಲಿ ಅಧಿಕಾರದಲ್ಲಿರುವ ಎರಡು ಬಲಿಷ್ಠ ರಾಷ್ಟ್ರಗಳ ತಂಡಗಳ ಆಟಗಾರರೇ ವಿವಾದದಲ್ಲಿ ಸಿಲುಕಿರುವ ಪ್ರಕರಣ ಈಗ ಜಠಿಲವಾಗಿ ಪರಿಣಮಿಸಿದೆ.ಆ್ಯಂಡರ್ಸನ್ ವಿರುದ್ಧ 3ನೇ ಸ್ತರದ ಅಪರಾಧ ಹೇರುವಂತೆ ಭಾರತ ಒತ್ತಾಯಿಸಿದೆ.