ಬಾಕ್ಸಿಂಗ್ ತಂಡಕ್ಕೆ ವಿಜೇಂದರ್ ನೇತೃತ್ವ
ನವದೆಹಲಿ: ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ವಿಜೇಂದರ್ ಸಿಂಗ್, ಬರುವ ಜುಲೈ 23ರಿಂದ ಆಗಸ್ಟ್ 3ರ ವರೆಗೆ ಗ್ಲಾಸ್ಗೋದಲ್ಲಿ ನಡೆಯಲಿರುವ ಕಾಮನ್ವೆಲ್ತ್ ಗೇಮ್ಸ್ನ ಬಾಕ್ಸಿಂಗ್ ವಿಭಾಗದಲ್ಲಿ ಭಾರತ ತಂಡದ ಸವಾಲು ಮುನ್ನಡೆಸಲಿದ್ದಾರೆ.
ಬಾಕ್ಸಿಂಗ್ ಅಡ್ಹಾಕ್ ಸಮಿತಿ ಆಯ್ಕೆ ಮಾಡಿರುವ ಒಟ್ಟು ಎಂಟು ಪುರುಷರು ಮತ್ತು ಮೂವರು ಮಹಿಳೆಯರು ಒಳಗೊಂಡ ತಂಡ ಸ್ಕಾಟ್ಲೆಂಡ್ ರಾಜಧಾನಿ ತಲುಪಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪದಕ ಗೆದ್ದು ಬರುವ ವಿಶ್ವಾಸ ಹೊಂದಿದೆ.
ಅನುಭವಿ ಆಟಗಾರ ವಿಜೇಂದರ್ ಸಿಂಗ್ 75.ಕೆ.ಜಿ. ತೂಕದ ವಿಭಾಗದಲ್ಲಿ ತಮ್ಮ ಸಾಮರ್ಥ್ಯವನ್ನು ಪರೀಕ್ಷೆಗೆ ಒಡ್ಡಲಿದ್ದಾರೆ. ಇತರೆ ಪ್ರಮುಖರಾದ ಶಿವ ಥಾಪಾ ಮತ್ತು ಎಲ್. ದೇವೇಂದ್ರೋ ಸಿಂಗ್ ಅವರು ಪದಕ ಗೆಲ್ಲುವ ನಂಬಿಕಸ್ತ ಬಾಕ್ಸರ್ಗಳಾಗಿದ್ದಾರೆ.
ಪುರುಷರ ತಂಡ: ಎಲ್. ದೇವೇಂದ್ರೋ ಸಿಂಗ್ (49ಕೆ.ಜಿ.), ಶಿವ ಥಾಪಾ (56ಕೆ.ಜಿ.), ಮಂದೀಪ್ ಜಂಗ್ರಾ (69ಕೆ.ಜಿ.), ವಿಜೇಂದರ್ ಸಿಂಗ್ (75ಕೆ.ಜಿ.), ಸುಮೀತ್ ಸಂಗ್ವಾನ್ (81ಕೆ.ಜಿ.), ಅಮೃತ್ಪ್ರೀತ್ ಸಿಂಗ್ (91ಕೆ.ಜಿ.), ಪ್ರವೀಣ್ಕುಮಾರ್ (91ಕೆ.ಜಿ.), ಜಿ.ಎಸ್. ಸಂಧು (ರಾಷ್ಟ್ರೀಯ ಮುಖ್ಯ ಕೋಚ್), ಬಿ.ಐ. ಫರ್ನಾಂಡೀಸ್ (ವಿದೇಶಿ ಕೋಚ್), ಸಿ.ಎ. ಕುಟ್ಟಪ್ಪ (ಕೋಚ್), ಗಗನ್ (ವೈದ್ಯ), ಗೌರವ್ ಅಹ್ಲುವಾಲಿಯಾ (ಫಿಜಿಯೊ).
ಮಹಿಳೆಯರ ತಂಡ: ಪಿಂಕಿ ಜಾಂಗ್ರಾ (51.ಕೆ.ಜಿ.), ಎಲ್. ಸರಿತಾ ದೇವಿ (60ಕೆ.ಜಿ.), ಪೂಜಾ ರಾಣಿ (75ಕೆ.ಜಿ.), ಹೇಮಲತಾ (ಕೋಚ್), ರೋಮೆನ್ ರೋಮೇರೊ ಡಾರ್ಕೆ (ವಿದೇಶಿ ಕೋಚ್).