ವಿಶ್ವ ಜೂನಿಯರ್ ಅಥ್ಲೆಟಿಕ್ಸ್ಗೆ ಕರ್ನಾಟಕದ ವಿಜಯ್ ಕುಮಾರಿ
ನವದೆಹಲಿ: ಕರ್ನಾಟಕದ ವಿಜಯ್ ಕುಮಾರಿ ಸೇರಿದಂತೆ, ಭಾರತದ ಒಟ್ಟು ಏಳು ಅಥ್ಲೀಟ್ಗಳ ತಂಡ, ಅಮೆರಿಕದಲ್ಲಿ ಜುಲೈ 22ರಿಂದ 27ರವರೆಗೆ ನಡೆಯಲಿರುವ ಐಎಎಎಫ್ ವಿಶ್ವ ಜೂನಿಯರ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಲಿದೆ.
ಐವರು ಬಾಲಕಿಯರು ಮತ್ತು ಇಬ್ಬರು ಬಾಲಕರನ್ನೊಳಗೊಂಡಿರುವ ಭಾರತ ತಂಡ ಸೋಮವಾರ ಅಮೆರಿಕಕ್ಕೆ ತೆರಳಲಿದೆ.ತಂಡ: ಜೆಸ್ಸಿ ಜೋಸೆಫ್, ಅರ್ಚನಾ ಅಧಾವ್, ನವ್ಜೀತ್ ಕೌರ್, ವಿವಿ ಜಿಶಾ, ಜಿ.ಕೆ ವಿಜಯ್ ಕುಮಾರಿ, ಸಚಿನ್ ಹಾಗೂ ಪರ್ವಿಂದರ್ ಕುಮಾರಿ. ಮುಖ್ಯ ಕೋಚ್ ಜೆ.ಎಸ್ ಭಾಟಿಯಾ ಅವರು ತಂಡದೊಂದಿಗೆ BÁÚÆ¥Û§Áæ.”C ತಂಡ ಭಾರತದ ಭವಿಷ್ಯದ ಅಥ್ಲಿಟಿಕ್ಸ್ ತಂಡ ಎಂದು ನನಗೆ ಅನಿಸುತ್ತಿದೆ. ಅಮೆರಿಕದಲ್ಲಿ ಯುವ ಆಟಗಾರರಿಂದ ಉತ್ತಮ ಪ್ರದರ್ಶನವನ್ನು ಎದುರು «æàÞsÚß~¡¥æ§ÞÈæ’ ಎಂದು ತಂಡದ ಕೋಚ್ ಭಾಟಿಯಾ ತಿಳಿಸಿದ್ದಾರೆ. ಬಾಲಕಿಯರ ವಿಭಾಗದಲ್ಲಿ ಜೆಸ್ಸಿ ಜೋಸೆಫ್ 800 ಮೀಟರ್ ಮತ್ತು 4್ಢ400 ಮೀಟರ್ ರೀಲೆ, ಅರ್ಚನಾ ಅಧಾವ್ 800 ಮೀಟರ್ ಮತ್ತು 4್ಢ400 ರಿಲೆ, ವಿವಿ ಜಿಶಾ 4್ಢ400 ರಿಲೆ, ಜಿ.ಕೆ ವಿಜಯ್ ಕುಮಾರಿ 4್ಢ400 ರಿಲೆ, ನವ್ಜೀತ್ ಕೌರ್ (ಶಾಟ್ಪುಟ್) ವಿಭಾಗದಲ್ಲಿ ಭಾಗವಹಿಸುತ್ತಿದ್ದಾರೆ. ಇನ್ನು ಬಾಲಕರ ವಿಭಾಗದಲ್ಲಿ ಸಚಿನ್ (ಡಿಸ್ಕಸ್ ಥ್ರೋ), ಪರ್ವಿಂದರ್ ಕುಮಾರ್ (ಜಾವೆಲಿನ್ ಥ್ರೋ) ವಿಭಾಗದಲ್ಲಿ ಭಾಗವಹಿಸುತ್ತಿದ್ದಾರೆ.
ಕಳೆದ ಏಪ್ರಿಲ್ನಲ್ಲಷ್ಟೇ ಗೋವಾದಲ್ಲಿ ನಡೆದ 11ನೇ ರಾಷ್ಟ್ರೀಯ ಯುತ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನ 4್ಢ400 ಮೀ ಮತ್ತು 200 ಮೀಟರ್ ವಿಭಾಗದಲ್ಲಿ ಕರ್ನಾಟಕದ ವಿಜಯ್ ಕುಮಾರಿ ಚಿನ್ನದ ಪದಕ ಗೆದ್ದುಕೊಂಡಿದ್ದರು. ಹೀಗಾಗಿ ಅಮೆರಿಕದಲ್ಲಿ ವಿಜಯ್ ಕುಮಾರಿ ಅತ್ಯುತ್ತಮ ಪ್ರದರ್ಶನ ನೀಡುವ ಭರವಸೆ ಮೂಡಿಸಿದ್ದಾರೆ.