ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಪದಕಗಳ ಮೇಲೆ ಲಿಫ್ಟರ್‌ಗಳ ಕಣ್ಣು

Vishwanath S
Updated On : 22 Jul 2014, 2:19 am

ನವದೆಹಲಿ: ಭಾರತೀಯ ವೇಟ್‌ಲಿಫ್ಟಿಂಗ್‌ಗೆ ಈ ಹಿಂದೆ ಅಂಟಿದ್ದ ಕಳಂಕದಿಂದ ತಲೆತಗ್ಗಿಸುವಂತಾಗಿದ್ದು, ಈಗ ಆ ಅಪಮಾನದಿಂದ ಹೊರಬರುವ ಪ್ರಯತ್ನದಲ್ಲಿರುವ ಕ್ರೀಡಾಪಟುಗಳು ಗ್ಲಾಸ್ಗೋ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಅತ್ಯುತ್ತಮ ಸಾಧನೆ ಮಾಡುವ ತುಡಿತದಲ್ಲಿದ್ದಾರೆ.
ಸ್ಕಾಟ್ಲೆಂಡ್ ರಾಜಧಾನಿಯಲ್ಲಿ ಬರುವ ಬುಧವಾರದಿಂದ ಆರಂಭವಾಗಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ವೇಟ್‌ಲಿಫ್ಟರ್‌ಗಳು ಸ್ಕಾಟಿಷ್ ಎಕ್ಸಿಬೀಷನ್ ಆ್ಯಂಡ್ ಕಾನ್ಫ್‌ರೆನ್ಸ್ ಸೆಂಟರ್‌ನಲ್ಲಿ ನಡೆಯಲಿರುವ ಸ್ಪರ್ಧೆಗಳಲ್ಲಿ ಪದಕಗಳನ್ನು ಗೆದ್ದು ಬರುವ ಹುಮ್ಮಸ್ಸಿನಲ್ಲಿದ್ದಾರೆ.
ಕಳೆದ 2010ರ ದೆಹಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದ ಕೆ. ರವಿ ಕುಮಾರ್ ಅವರು, ಪಥಸಂಚಲನದಲ್ಲಿ ರಾಷ್ಟ್ರಧ್ವಜ ಹಿಡಿದು ತಂಡವನ್ನು ಮುನ್ನಡೆಸಲಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಸಂಜೀತಾ ಚಾನು ಸಾರಥ್ಯ ವಹಿಸಲಿದ್ದಾರೆ.
ಈ ಬಾರಿಯ ಕ್ರೀಡಾಕೂಟದಲ್ಲಿ ಪುರುಷ-ಮಹಿಳೆಯರು ಸೇರಿದಂತೆ ಒಟ್ಟು 15 ಲಿಫ್ಟರ್‌ಗಳು ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement