ಸಾನಿಯಾ ತರಬೇತಿಗೆ ಕೋಟಿ ರು.
ಹೈದರಾಬಾದ್: ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರ ತರಬೇತಿ ಮತ್ತು ಕೋಚಿಂಗ್‌ಗೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ಸೋಮವಾರ ರು. 1 ಕೋಟಿ ಘೋಷಿಸಿದ್ದಾರೆ.
'ಯುಎಸ್ ಓಪನ್ ಗ್ರಾನ್ ಸ್ಲಾಮ್ ಪಂದ್ಯಾವಳಿ ಹಿನ್ನೆಲೆಯಲ್ಲಿ ವಿಶ್ವ ಮಹಿಳಾ ಟೆನಿಸ್ ರ್ಯಾಂಕಿಂಗ್‌ನ ಡಬಲ್ಸ್ ವಿಭಾಗದಲ್ಲಿ 5ನೇ ಸ್ಥಾನದಲ್ಲಿರುವ ಸಾನಿಯಾ ಮಿರ್ಜಾ ಅವರ ತರಬೇತಿ, ಕೋಚಿಂಗ್ ಹಾಗೂ ಇತರ ಖರ್ಚುಗಳನ್ನು ಭರಿಸಲು ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರು. 1 ಕೋಟಿ ಹಣ ಘೋಷಿಸಿದ್ದಾರೆ' ಎಂದು ಮುಖ್ಯಮಂತ್ರಿ ಕಚೇರಿಯಿಂದ ಮಾಹಿತಿ ಬಂದಿದೆ.