ಗೆದ್ದ ಅಧ್ಯಕ್ಷರ ಇಲೆವೆನ್
ಡಾರ್ವಿನ್: ಕೆ. ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೆಎಸ್ಸಿಎ ಅಧ್ಯಕ್ಷರ ಇಲೆವೆನ್ ತಂಡ ಹಿಮಾಚಲ ಪ್ರದೇಶದ ವಿರುದ್ಧ ಇನಿಂಗ್ಸ್ ಮತ್ತು 9 ರನ್ಗಳ ಅಂತರದಿಂದ ಜಯ ಸಾಧಿಸಿತು. ಇನ್ನ್ನು ಕೆಎಸ್ಸಿಎ ಇಲೆವೆನ್ ತಂಡ ಪಂದ್ಯದ ಮೂರನೇ ದಿನ ತ್ರಿಪುರ ಕ್ರಿಕೆಟ್ ಸಂಸ್ಥೆಯ ವಿರುದ್ಧ 225ರನ್ಗಳ ಅಂತರದ ಮುನ್ನ್ನಡೆ ಸಾಧಿಸಿದೆ.
ಆಲೂರಿನಲ್ಲಿ ನಡೆಯುತ್ತಿರುವ ಮತ್ತೊಂದು ಪಂದ್ಯದಲ್ಲಿ ಕೆಎಸ್ಸಿಎ ಕಾಲ್ಟ್ಸ್ ತಂಡ ಪುಣೆಯ ಡಿ. ವೈಪಾಟೀಲ್ ಅಕಾಡೆಮಿ ವಿರುದ್ಧ 82 ರನ್ಗಳ ಮುನ್ನ್ನಡೆಕಂಡುಕೊಂಡಿದೆ. ಒಡಿಶಾ ಕ್ರಿಕೆಟ್ ಸಂಸ್ಥೆ, ಹರ್ಯಾಣ ಕ್ರಿಕೆಟ್ ಸಂಸ್ಥೆ ವಿರುದ್ಧ 18 ರನ್ಗಳ ಅಲ್ಪ ಮುನ್ನ್ನಡೆ ಪಡೆದುಕೊಂಡಿದೆ.