ಮುಂಬೈ, ಕೇರಳಕ್ಕೆ ಸ್ಟಾರ್ ಪ್ರತಿಭೆಗಳು
ಮುಂಬೈ: ಭಾರತೀಯ ಫುಟ್ಬಾಲ್ನಲ್ಲಿ ಹೊಸ ಸಂಚಲನ ಸೃಷ್ಟಿ ಮಾಡಿರುವ ಇಂಡಿಯನ್ ಸೂಪರ್ ಲೀಗ್ನ (ಐಎಸ್ಎಲ್) ಎಂಟು ಫ್ರಾಂಚೈಸಿಗಳು ಒಟ್ಟು 42 ಆಟಗಾರರನ್ನು ಮುಂಬೈನಲ್ಲಿ ಮಂಗಳವಾರ ನಡೆದ ಹರಾಜಿನಲ್ಲಿ ಖರೀದಿಸಿದವು.
ಮುಂಬೈ ಮತ್ತು ಕೇರಳ ಫ್ರಾಂಚೈಸಿಗಳು ತಲಾ ನಾಲ್ಕು ರಾಷ್ಟ್ರೀಯ ತಂಡದಲ್ಲಿರುವ ಆಟಗಾರರನ್ನು ಖರೀದಿಸಿದರೆ, ಅಟ್ಲೆಟಿಕೊ ಡಿ ಕೋಲ್ಕತಾ, ಡೆಲ್ಲಿ ಡೈನೋಮೋಸ್, ಕೇರಳ ಬ್ಲಾಸ್ಟರ್ಸ್ ಎಫ್ಸಿ, ಪುಣೆ ಹಾಗೂ ಬೆಂಗಳೂರು ತಂಡಗಳು ತಮ್ಮ ಆಟಗಾರರನ್ನು ಖರೀದಿಸಿದವು. ಇತರ ಎರಡು ಫ್ರಾಂಚೈಸಿಗಳಾದ ನಾರ್ಥ್ ಈಸ್ಟ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಮತ್ತು ಗೋವಾ ತಂಡಗಳು ತಮ್ಮ ಐ-ಲೀಗ್ ಪಾಲುದಾರ ಕ್ಲಬ್ಗಳಾದ ಶಿಲ್ಲಾಂಗ್ ಲಜಾಂಗ್ ಮತ್ತು ಡೆಂಪೊ ತಂಡದ ಆಟಗಾರರನ್ನೇ ಉಳಿಸಿಕೊಂಡಿವೆ. ಕೋಲ್ಕತಾ ತಂಡ 7 ರಾಷ್ಟ್ರೀಯ ಆಟಗಾರರನ್ನ್ನು ಖರೀದಿಸಿತು. ಆಟಗಾರರಿಗೆ 15ರಿಂದ 80 ಲಕ್ಷ ಹಣ ನೀಡಲಾಗುತ್ತಿದೆ.
ಬುಧವಾರ ಮತ್ತೆ ಹರಾಜು ಪ್ರಕ್ರಿಯೆ ನಡೆಯಲಿದೆ. ಪಂದ್ಯಾವಳಿಯಲ್ಲಿರುವ ಪ್ರತಿಯೊಂದು ಫ್ರಾಂಚೈಸಿ ಭಾರತದ 14 ಆಟಗಾರರು, ಏಳು ಅಂತಾರಾಷ್ಟ್ರೀಯ ಹಾಗೂ ಓರ್ವ ವಿದೇಶಿ ಪ್ರಮುಖ ಆಟಗಾರನನ್ನು ಹೊಂದಬಹುದು.
ಯಾವ ಆಟಗಾರರು ಯಾರಿಗೆ:
ಪುಣೆ: ಲಿನ್ ರೋಡ್ರಿಗಸ್, ಧರ್ಮರಾಜ್ ರಾವನನ್, ಅಶುತೋಶ್ ಮೆಹ್ತಾ, ಜಾಕ್ವಿಮ್ ಅಬ್ರಂಚೆಸ್, ಪ್ರೀತಮ್ ಕೋಟ್ಲಾ, ಮನೀಶ್ ಮೈಥಾನಿ, ಇಸ್ರೇಲ್ ಗುರುಂಗ್.ಮಂಬೈ: ಸುಬ್ರತಾ ಪಾಲ್, ಲಾಲ್ರಿಂಡಿಕಾ ರಾಲ್ಟೆ, ಸೈಯಿದ್ ರಹೀಮ್ ನಬಿ, ರಾಜು ಗಾಯಕ್ವಾಡ್, ಸುಬಾಷ್ ಸಿಂಗ್, ರಾಮ್ ಮಲಿಕ್, ದೀಪಕ್ ಮೊಂದಲ್.
ಕೇರಳ ಬ್ಲಾಸ್ಟರ್ಸ್: ಮೆಹ್ತಬ್ ಹುಸೇನ್, ಸಂದೇಶ್ ಝಿಂಗನ್, ಇಶ್ಫಿಖ್ ಅಹ್ಮದ್, ಗುರ್ವಿಂದರ್ ಸಿಂಗ್, ನಿರ್ಮಲ್ ಚೆಟ್ರಿ, ಸುಶಾಂತ್ ಮ್ಯಾಥ್ಯೂ, ಗಾಡ್ವಿನ್ ಫ್ರಾಂಕೊ.
ಅಟ್ಲೆಟಿಕೊ ಡಿ ಕೊಲ್ಕತಾ: ಕಾವಿನ್ ಲೊಬೊ, ಅರ್ನಾಬ್ ಮೊಂದಲ್, ಡೆಂಜಿಲ್ ಫ್ರಾಂಕೊ, ರಾಕೆಶ್ ಮಸಿಹ, ಮೊಹ್ಮದ್ ರಫಿಕ್, ಮೊಹ್ಮದ್ ರಫಿ, ಬಿಸ್ವಾಜಿತ್ ಸಾಹ.ಡೆಲ್ಲಿ ಡೈನಾಮೋಸ್: ಫ್ರಾಂಕಿಸ್ ಫೆರ್ನಾಂಡೀಸ್, ರಾಬರ್ಟ್ ಲಾಲ್ಥಾಮುನಾ, ನಾವೊಬಾ ಸಿಂಗ್, ಶೈಲೋ ಮಲ್ಸಾಮ್ತುವಾಂಗಾ, ಶೋವಿಕ್ ಘೋಶ್, ಶೋವಿಕ್ ಚಕ್ರವರ್ತಿ, ಮನ್ಮುನ್ ಲೂಗುನ್.
ನಾರ್ಥ್ ಈಸ್ಟ್ ಯುನೈಟೆಡ್ ಎಫ್ಸಿ: ಕಂಜಾಂಗ್ ಭುಟಿಯಾ, ಜಿಬಾನ್ ಸಿಂಗ್, ದುರ್ಗಾ ಬೊರೊ, ಐಬೋರ್ ಖಾಂಗ್ಜೀ, ಜೋಡಿಂಗ್ಲೈನಾ ರಾಟ್ಲೆ, ಟಿಪಿ ರೆಹ್ನೆಶ್, ಬೋಯಿಥಾಂಗ್ ಹಾಕಿಪ್.
ಗೋವಾ: ಲಕ್ಷ್ಮಿಕಾಂತ್ ಖಟ್ಟಿಮನಿ, ಡೆಬಬ್ರತಾ ರಾಯ್, ಗ್ಯಾಬ್ರಿಯಲ್ ಫೆರ್ನಾಂಡೀಸ್, ಕ್ಲಿಫಾರ್ಡ್ ಮಿರಾಂಡಾ, ಜ್ಯೂವೆಲ್ ರಾಜಾ, ಅಲ್ವೆನ್ ಜಾರ್ಜ್, ನಾರಾಯಣ ದಾಸ್. ಬೆಂಗಳೂರಿಗೆ ಗೌರಮಾಂಗಿ
ಭಾರತ ತಂಡದ ರಕ್ಷಣಾ ವಿಭಾಗದ ಆಟಗಾರ ಗೌರಮಾಂಗಿ ಸಿಂಗ್ ಅವರನ್ನು ಬೆಂಗಳೂರು ಫ್ರಾಂಚೈಸಿ ಖರೀದಿಸಿತು. ಹರ್ಮಾನ್ಜೋತ್ ಖಬ್ರಾ, ಧನಚಂದ್ರಾ ಸಿಂಗ್, ಜೆಜೆ ಲಾಲ್ಪೆಖಲ್ವಾ, ಗೌರಿಮಾಂಗಿ ಸಿಂಗ್, ಶಿಲ್ಟಾನ್ ಪಾಲ್, ಡೆನ್ಸನ್ ದೇವದಾಸ್, ಖೆಲೆಂಬಾ ಮೀತಿ ಸೇರಿ ಬೆಂಗಳೂರು ಒಟ್ಟು ಎಂಟು ಆಟಗಾರರನ್ನು ಖರೀದಿಸಿತು.