ಹರಿಣಗಳ ಮೇಲೆ ಭಾರತ ಸವಾರಿ
ಡಾರ್ವಿನ್: ಆರಂಭಿಕ ಆಘಾತದ ಹೊರತಾಗಿಯೂ ಮನೀಷ್ ಪಾಂಡೆ (91) ಮತ್ತು ಮನೋಜ್ ತಿವಾರಿ (93) ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಭಾರತ ಎ ತಂಡ, ದಕ್ಷಿಣ ಆಫ್ರಿಕಾ ವಿರುದ್ಧದ ಚತುಷ್ಕೋನ ಏಕದಿನ ಸರಣಿಯಲ್ಲಿ ಸುಲಭ ಗೆಲವು ದಾಖಲಿಸಿದೆ.
ಮಂಗಳವಾರ ಇಲ್ಲಿನ ಗಾರ್ಡೆನ್ಸ್ ಒವಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ 70 ರನ್ಗಳ ಅರ್ಹ ಗೆಲವು ದಾಖಲಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಭಾರತ ಎ ತಂಡ, 50 ಓವರ್ಗಳಲ್ಲಿ 7 ವಿಕೆಟ್ಗೆ 326 ರನ್ ದಾಖಲಿಸಿದರು. ಈ ಬೃಹತ್ ಸವಾಲನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ 47.1 ಓವರ್ಗಳಲ್ಲಿ 256 ರನ್ಗಳಿಗೆ ತನ್ನೇಲ್ಲಾ ವಿಕೆಟ್ ಕಳೆದುಕೊಂಡು ಭಾರತದ ಮುಂದೆ ಶರಣಾಯಿತು.
ಭಾರತದ ಪರ ಮನೀಷ್ ಪಾಂಡೆ (91 ರನ್, 108 ಎಸೆತ, 7 ಬೌಂಡರಿ, 1ಸಿಕ್ಸರ್) ಮತ್ತು ಮನೋಜ್ ತಿವಾರಿ (93 ರನ್, 73 ಎಸೆತ, 9 ಬೌಂಡರಿ, 1 ಸಿಕ್ಸರ್) ಅವರ ಜವಾಬ್ದಾರಿಯುತ ಬ್ಯಾಟಿಂಗ್, ಭಾರತ ತಂಡ ಬೃಹತ್ ಮೊತ್ತ ಪೇರಿಸಲು ನೆರವಾಯಿತು. ಇನ್ನು ಹರಿಣಗಳ ಪರ ಮರ್ಚೆಂಟ್ ಡಿ ಲ್ಯಾಂಗೆ 64 ರನ್ಗೆ 5 ವಿಕೆಟ್ ಕಬಳಿಸಿದರು. ಬೃಹತ್ ಮೊತ್ತವನ್ನು ಬೆನ್ನಟ್ಟಿದ ಆಫ್ರಿಕಾ ತಂಡದ ಹೋರಾಟಕ್ಕೆ ರೀಜಾ ಹೆಂಡ್ರಿಕ್ಸ್ (52 ರನ್, 68 ಎಸೆತ, 6 ಬೌಂಡರಿ 1 ಸಿಕ್ಸರ್) ಮತ್ತು ಜಸ್ಟಿನ್ ಒಟೊಂಗ್ (48 ರನ್, 40 ಎಸೆತ, 5 ಬೌಂಡರಿ) ಸ್ವಲ್ಪ ಮಟ್ಟಿಗೆ ನೆರವಾದರೂ ಪ್ರಯೋಜನವಾಗಲಿಲ್ಲ. ಭಾರತದ ಪರ ಮಾರಕ ದಾಳಿ ನಡೆಸಿದ ಧವಳ್ ಕುಲಕರ್ಣಿ 54 ರನ್ಗಳಿಗೆ 5 ವಿಕೆಟ್ ಪಡೆದು ಮಿಂಚಿದರು.
ಸಂಕ್ಷಿಪ್ತ ಸ್ಕೋರ್:
ಭಾರತ ಎ 50 ಓವರುಗಳಲ್ಲಿ 7 ವಿಕೆಟ್ಗೆ 326
(ಮನೋಜ್ ತಿವಾರಿ 93, ಮನೀಷ್ ಪಾಂಡೆ 91, ಲ್ಯಾಂಗೆ 64ಕ್ಕೆ5)
ದಕ್ಷಿಣ ಆಫ್ರಿಕಾ ಎ 47.1 ಓವರುಗಳಲ್ಲಿ 256
(ರೀಜಾ ಹೆಂಡ್ರಿಕ್ಸ್ 52, ಒಟೊಂಗ್ 48, ಧವಳ್ ಕುಲಕರ್ಣಿ 54ಕ್ಕೆ5)