32 ವರ್ಷಗಳ ನಂತರ ಪುರುಷ ಬಾಕ್ಸರ್ಗಳಿಗೆ ರಕ್ಷಾಕವಚ ಇಲ್ಲ
ಗ್ಲಾಸ್ಗೋ: ಈ ಬಾರಿ ಕಾಮನ್ವೆಲ್ತ್ ಕ್ರೀಡಾಕೂಟದ ಬಾಕ್ಸಿಂಗ್ ಸ್ಪರ್ಧೆಗಳು ಅಭಿಮಾನಿಗಳಲ್ಲಿ ಕೊಂಚ ಕುತೂಹಲ ಕೆರಳಿಸಿವೆ. ಕಾರಣ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿರುವ ಪುರುಷ ಬಾಕ್ಸಿಂಗ್ಪಟುಗಳು ಶಿರ ರಕ್ಷಾ ಕವಚ ಧರಿಸುವಂತಿಲ್ಲ. 1982ರಿಂದ ಅಂದರೆ 32 ವರ್ಷಗಳಿಂದ ಶಿರ ರಕ್ಷಾ ಕವಚ ಧರಿಸಲು ಅನುಮತಿ ನೀಡಲಾಗಿತ್ತು. ಈ ಬಾರಿ ಶಿರ ರಕ್ಷಾ ಕವಚ ಧರಿಸದಿದ್ದರೂ ಬಾಕ್ಸರ್ಗಳು ಸುರಕ್ಷಿತವಾಗಿರುತ್ತಾರೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಆದರೆ, ಮಹಿಳಾ ಬಾಕ್ಸರ್ಗಳಿಗೆ ಶಿರ ರಕ್ಷಾ ಕವಚ ಧರಿಸಲು ಅನುಮತಿ ನೀಡಲಾಗಿದೆ. 1984ರ ಲಾಸ್ ಏಂಜೆಲೀಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಶಿರ ರಕ್ಷಾ ಕವಚ ಪರಿಚಯಿಸಿದಾಗಿನಿಂದ, ಎಲ್ಲ ಅಂತಾರಾಷ್ಟ್ರೀಯ ಅಮೆಚೂರ್ ಬಾಕ್ಸಿಂಗ್ ಸ್ಪರ್ಧೆಗಳಲ್ಲಿ ಶಿರ ರಕ್ಷಾ ಕವಚ ಬಳಸಲಾಗುತ್ತಿದೆ. ಆದರೆ ಸಂಶೋಧಕರ ಪ್ರಕಾರ, ಶಿರ ರಕ್ಷಾ ಕವಚಗಳು ಬಾಕ್ಸರ್ಗಳಲ್ಲಿ ಗಾಯವನ್ನು ಹೆಚ್ಚಿಸುತ್ತವೆ ಎನ್ನಲಾಗಿದೆ. ಹೀಗಾಗಿ ಹೆಡ್ಗಾರ್ಡ್ಗೆ ಈ ಬಾರಿ ಗುಡ್ಬೈ ಹೇಳಲಾಗಿದೆ. 1997ರಿಂದ ಇಂಗ್ಲೆಂಡ್ ಬಾಕ್ಸಿಂಗ್ ಫೆಡರೇಷನ್ ಜತೆ ಕಾರ್ಯನಿರ್ವಹಿಸುತ್ತಿರುವ ಇಂಗ್ಲೀಷ್ ಕ್ರೀಡಾ ಸಂಸ್ಥೆಯ ಡಾಕ್ಟರ್ ಮೈಕ್ ಲೂಸ್ಮೋರ್, ಶಿರ ರಕ್ಷಾ ಕವಚ ಬಳಸದಿರುವುದು ಉತ್ತಮವಾದ ಬೆಳವಣಿಗೆ ಎಂದು ಅಭಿಪ್ರಾಯಪಟ್ಟಿದ್ದಾರೆ.