ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಅಕ್ರಿಡೇಷನ್ ಸಿಗದೇ ವಾಪಸ್

Mainashree
Updated On : 24 Jul 2014, 2:05 am

ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಇಂಗ್ಲೆಂಡ್‌ನ ಬಾಕ್ಸಿಂಗ್‌ಪಟು ಫ್ರೆಡ್ ಇವಾನ್ಸ್ ಅವರು ಅಕ್ರಿಡೇಷನ್ ದೊರಕದ ಕಾರಣ ಕಾಮನ್ ವೆಲ್ತ್ ಕ್ರೀಡಾಕೂಟದಿಂದ ಹೊರಗುಳಿದಿದ್ದಾರೆ.
ಫ್ರೆಡ್ ತಮ್ಮ ತಂಡದೊಂದಿಗೆ ಮಂಗಳವಾರವೇ ಗ್ಲಾಸ್ಗೋಗೆ ತೆರಳಬೇಕಿತ್ತಂತೆ. ಆದರೆ, ತಡವಾಗಿ ತೆರಳಿದ ಹಿನ್ನೆಲೆಯಲ್ಲಿ, ಆತನಿಗೆ ಅಕ್ರಿಡೇಷನ್ ನೀಡಲು ನಿರಾಕರಿಸಲಾಗಿದೆ.
'ನಿಗದಿತ ಸಮಯ ಮೀರಿ ಆಗಮಿಸಿದ ಹಿನ್ನೆಲೆಯಲ್ಲಿ ಬಾಕ್ಸಿಂಗ್ ಪಟು ಫ್ರೆಡ್ ಇವಾನ್ಸ್ ಅವರಿಗೆ ಗ್ಲಾಸ್ಗೋ 2014ರ ಕ್ರೀಡಾಕೂಟದ ಅಕ್ರಿಡೇಷನ್ ನೀಡಲು ನಿರಾಕರಿಸಲಾಗಿದೆ. ನಿಗದಿತ ಸಮಯದಲ್ಲಿ ಇಂಗ್ಲೆಂಡ್ ಅಧಿಕಾರಿಗಳು ಮತ್ತು ಕಾಮನ್‌ವೆಲ್ತ್ ಕ್ರೀಡಾಕೂಟದ ಅಧಿಕಾರಿಗಳು ತಂಡವನ್ನು ಪರಿಶೀಲಿಸಿದಾಗ ಅವರು ತಂಡದಲ್ಲಿ ಇರಲಿಲ್ಲ' ಎಂದು ತಂಡದ ಮುಖ್ಯಸ್ಥ ಬ್ರಿಯಾನ್ ಡೇವಿಸ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement