ಕ್ಯಾನ್ಸರ್ ತಪ್ಪಿಸಿದ ಅವಕಾಶ
ಎರಡು ಬಾರಿ ವಿಶ್ವ ಚಾಂಪಿಯನ್ ಇಂಗ್ಲೆಂಡ್‌ನ ಸೈಕ್ಲಿಂಗ್‌ಪಟು ಬೇಕಿ ಜೇಮ್ಸ್ ಅವರು, ಈಗ ಕಾಮನ್ ವೆಲ್ತ್ ಕ್ರೀಡಾ ಗ್ರಾಮದಲ್ಲಿ ಗಂಭೀರವಾಗಿ ಅಭ್ಯಾಸದಲ್ಲಿ ತೊಡಗಿರಬೇಕಿತ್ತು. ಆದರೆ, ಅವರಲ್ಲಿ ಉಂಟಾಗಿರುವ ಕ್ಯಾನ್ಸರ್ ಭೀತಿ ಕ್ರೀಡಾಕೂಟದಿಂದಲೇ ಹೊರಗುಳಿಯುವಂತೆ ಮಾಡಿದೆ.
ಮೊದ ಮೊದಲು ಬೇಕಿ ಅವರು ತಮ್ಮ ಮೊಣಕಾಲು ನೋವು, ಕ್ರೀಡಾಕೂಟದಿಂದ ಹೊರಗುಳಿಯುವಂತೆ ಮಾಡಬಹುದು ಎಂಬ ಚಿಂತೆಯಲ್ಲಿದ್ದರಂತೆ. ಆದರೆ, ನಂತರ ಕ್ಯಾನ್ಸರ್ ಆವರಿಸಿರುವ ಸಾಧ್ಯತೆಗಳು ಪರೀಕ್ಷೆಯಿಂದ ತಿಳಿದು ಬಂದ ಹಿನ್ನೆಲೆಯಲ್ಲಿ ಕ್ರೀಡಾಕೂಟದಿಂದ ಹೊರಗುಳಿದಿದ್ದಾರಂತೆ.
'ಆರೋಗ್ಯ ಎಷ್ಟು ಮುಖ್ಯ ಎಂಬುದನ್ನು ಈಗ ನಾನು ಅರಿತುಕೊಂಡಿದ್ದೇನೆ. ಜರ್ಮನಿ ರೇಸ್‌ಗೂ ಮುನ್ನ ಸ್ನೇಹಿತರೊಬ್ಬರ ಜತೆ ಮಾತನಾಡುವಾಗ ನನ್ನ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಸಿದ್ದೆ' ಎಂದಿದ್ದಾರೆ ಬೇಕಿ.