ಜಾಕೆಟ್ ಮಾಯ ತಪ್ಪಿದ ಗುರಿ!
ನಾಲ್ಕು ವರ್ಷಗಳ ಹಿಂದೆ ದೆಹಲಿಯಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದ ಶೂಟಿಂಗ್ ವಿಭಾಗದಲ್ಲಿ ಚಿನ್ನ ಗೆದ್ದಿದ್ದಳು ಮಲೇಷ್ಯಾದ ನೂರ್ ಆಯುನಿ ಫರ್ಹಾನಾ ಅಬ್ದುಲ್ ಹಲೀಮ್. ಆದರೆ, ಈ ಬಾರಿ ಸ್ಪರ್ಧೆಗಳು ನಡೆಯುವ ಮುನ್ನ ತಮ್ಮ ಜಾಕೆಟ್ ಕಳೆದುಕೊಳ್ಳುವ ಮೂಲಕ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಭಾಗವಹಿಸುವ ಅರ್ಹತೆ ಕಳೆದುಕೊಂಡಿದ್ದಾಳೆ.
ನಿಯಮದ ಪ್ರಕಾರ ಶೂಟರ್ಗಳು ಜಾಕೆಟ್ ತೊಡಲೇಬೇಕು. ಆದರೆ, ಆಕೆಗಾಗಿ ತಂಡದ ಮ್ಯಾನೇಜರ್ ಮತ್ತೊಂದು ಜಾಕೆಟ್ ಕೊಳ್ಳಲು ಮುಂದಾಗಿದ್ದಾರೆ. ಅದರ ಅಳತೆಯಲ್ಲಿ ವ್ಯತ್ಯಾಸ ಕಂಡುಬಂದ ಕಾರಣ, ಆಕೆ ಜಾಕೆಟ್ ಇಲ್ಲದೆ ಪಂದ್ಯಾವಳಿಯಿಂದ ವಾಪಸ್ ಬರುವಂತಾಗಿದೆ.
ಗ್ಲಾಸ್ಗೋಗೆ ತೆರಳುವಾಗ ಲಂಡನ್ನಲ್ಲಿ ಕೆಲ ವಸ್ತುಗಳಿದ್ದ ಬ್ಯಾಗೊಂದನ್ನು ನೂರ್ ಕಳೆದುಕೊಂಡಿದ್ದಾರೆ. ಅದರಲ್ಲಿ ಜಾಕೆಟ್ ಸಹ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.