ನಿಷೇಧಿತ ಔಷಧ ಸೇವಿಸಿದ್ದ ರಾಣಿ ಅಶ್ವ
ಲಂಡನ್: ಕಳೆದ ವರ್ಷ ನಡೆದ ಪ್ರತಿಷ್ಠಿತ ಗೋಲ್ಡ್ ಕಪ್ ಗೆದ್ದುಕೊಂಡ ಎರಡನೇ ಎಲಿಜೆಬೆತ್ ರಾಣಿಯ ಒಡೆತನದ ರೇಸಿನ ಕುದುರೆ ನಿಷೇಧಿತ ಔಷಧ ಸೇವಿಸಿರುವುದು ಪತ್ತೆಯಾಗಿದೆ. ಇದನ್ನು ಬಕಿಂಗ್ಹ್ಯಾಮ್ ಅರಮನೆ ಪ್ರಕಟಿಸಿದೆ.ಮೈಕೆಲ್ ಸ್ಟೌಟೆ ಎಂಬುವರಲ್ಲಿ ತರಬೇತಿ ಪಡೆದಿರುವ ಐದು ಕುದುರೆಗಳಲ್ಲಿ ಒಂದಾದ 5 ವರ್ಷದ ಕುದುರೆ ಮಾರ್ಫಿನೆ ಎಂಬ ಔಷಧ ಸೇವಿಸಿರುವುದು ಖಚಿತಪಟ್ಟಿದೆ. ಅಶುದ್ಧವಾದ ಅಹಾರ ಉತ್ಪಾದನೆಗಳನ್ನು ಕುದುರೆಗೆ ನೀಡಿರುವುದೇ, ಮಾರ್ಫಿನೆ ಅದರ ದೇಹದಲ್ಲಿ ಸೇರಿಕೊಳ್ಳಲು ಕಾರಣ ಎಂದು ಅರಮನೆ ತಿಳಿಸಿದೆ.ಈ ಕುದುರೆ, ಬ್ರಿಟನ್ನ ರಾಜಮನೆತನದ ಪರವಾಗಿ ಮೊದಲ ಬಾರಿಗೆ ರಾಣಿ ಗೋಲ್ಡ್ ಕಪ್ ಗೆಲ್ಲುವಂತೆ ಮಾಡಿತ್ತು.