ಮೂರನೇ ಟೆಸ್ಟ್: ಪ್ರಯರ್ ಸ್ಥಾನಕ್ಕೆ ಬಟ್ಲರ್
ಲಂಡನ್: ಭಾರತ ವಿರುದ್ಧದ ಮೂರನೇ ಕ್ರಿಕೆಟ್ ಟೆಸ್ಟ್ ಪಂದ್ಯಕ್ಕಾಗಿ ಯುವ ವಿಕೆಟ್ ಕೀಪರ್ ಜೋಸ್ ಬಟ್ಲರ್ ಇಂಗ್ಲೆಂಡ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಕಳಪೆ ಫಾರ್ಮ್ ಮತ್ತು ಗಾಯದ ಸಮಸ್ಯೆಯಿಂದಾಗಿ ಲಾರ್ಡ್ಸ್ನಲ್ಲಿನ ಎರಡನೇ ಟೆಸ್ಟ್ ಪಂದ್ಯದ ನಂತರ ತಂಡದಿಂದ ಹೊರಗುಳಿದಿರುವ ಮ್ಯಾಟ್ ಪ್ರಯರ್ ಸ್ಥಾನವನ್ನು ಬಟ್ಲರ್ ತುಂಬಲಿದ್ದಾರೆ.ಈ ಮಧ್ಯೆ ಲಂಕಾಶೈರ್ನ ಸ್ಪಿನ್ನರ್ ಸೈಮನ್ ಕೆರಿಂಗನ್ ಸಹ ಇಂಗ್ಲೆಂಡ್ ತಂಡದಿಂದ ಹೊರನಡೆದಿದ್ದಾರೆ. ಆದರೆ, ಆ ಸ್ಥಾನಕ್ಕೆ ಯಾರನ್ನೂ ಆಯ್ಕೆ ಮಾಡಲಾಗಿಲ್ಲ.
ಇಂಗ್ಲೆಂಡ್ ತಂಡ ಇಂತಿದೆ: ಅಲಸ್ಟೇರ್ ಕುಕ್ (ನಾಯಕ), ಮೊಯೀನ್ ಅಲಿ, ಜೇಮ್ಸ್ ಆ್ಯಂಡರ್ಸನ್, ಗ್ಯಾರಿ ಬ್ಯಾಲೆನ್ಸ್, ಇಯಾನ್ ಬೆಲ್, ಸ್ಟುವರ್ಟ್ ಬ್ರಾಡ್, ಜೋಸ್ ಬಟ್ಲರ್, ಕ್ರಿಸ್ ಜೋರ್ಡಾನ್, ಲಿಯಂ ಪ್ಲಂಕೆಟ್, ಸ್ಯಾಮ್ ರಾಬ್ಸನ್, ಜೋ ರೂಟ್, ಬೆನ್ ಸ್ಟೋಕ್ಸ್, ಕ್ರಿಸ್ ವೋಕ್ಸ್.