ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಮೊದಲ ಪದಕದ ಲಿಫ್ಟ್‌ನ ನಿರೀಕ್ಷೆ

Mainashree
Updated On : 24 Jul 2014, 2:09 am

ಗ್ಲಾಸ್ಗೋ: 20ನೇ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಗುರುವಾರ ಆರಂಭವಾಗುವ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಭಾರತ ತನ್ನ ಮೊದಲ ಪದಕದ ಖಾತೆ ತೆರೆಯಲು ಎದುರು ನೋಡುತ್ತಿದೆ.
ಮೊದಲು ಮಹಿಳೆಯರ ವಿಭಾಗದ 48 ಮತ್ತು ಪುರುಷರ ವಿಭಾಗದ 56 ಕೆಜಿ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.
2010ರ ಡೆಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕಿಂತ, ಹೆಚ್ಚಿನ ಪದಕಗಳನ್ನು ಗೆಲ್ಲುವ ಕಾತರದಲ್ಲಿರುವ ಭಾರತ, ಈ ಎರಡೂ ವಿಭಾಗಗಳಲ್ಲಿ ಪದಕಗಳನ್ನು ಜಯಿಸಲು ಎದುರು ನೋಡುತ್ತಿದೆ.
2010ರ ಆವೃತ್ತಿಯಲ್ಲಿ ಐದು ಚಿನ್ನ, ನಾಲ್ಕು ಬೆಳ್ಳಿ ಹಾಗೂ ಐದು ಕಂಚಿನ ಪದಕ ಗೆದ್ದಿದ್ದ ನೈಜೀರಿಯಾ ವೇಟ್‌ಲಿಫ್ಟಿಂಗ್‌ನಲ್ಲಿ ಹೆಚ್ಚಿನ ಪದಕಗಳನ್ನು ಗೆದ್ದುಕೊಂಡು ಅಗ್ರಸ್ಥಾನದಲ್ಲಿತ್ತು. ಭಾರತ ಎರಡು ಚಿನ್ನ, ಎರಡು ಬೆಳ್ಳಿ ಹಾಗೂ 4 ಕಂಚಿನ ಪದಕ ಗೆದ್ದುಕೊಂಡಿತ್ತು. ಈ ಬಾರಿ ಸಹ ಭಾರತ ಹೆಚ್ಚಿನ ಪದಕಗಳನ್ನು ಗೆಲ್ಲಲು ಎದುರು ನೋಡುತ್ತಿದೆ.
ವಿದೇಶದಲ್ಲಿ ತರಬೇತಿ ಪಡೆಯಲು ಹಣಕಾಸಿನ ನೆರವು ನೀಡದ ಹಿನ್ನೆಲೆಯಲ್ಲಿ ಈ ಬಾರಿ ನೈಜೀರಿಯಾ ಶ್ರೇಷ್ಠ ತರಬೇತಿ ಪಡೆದುಕೊಂಡಿಲ್ಲ. ಆದರೆ, 2010ರಲ್ಲಿ ಚಿನ್ನದ ಪದಕ ಗೆದ್ದ ಓಬಿಯೋವಾ ಅಂಗತಾ ಓಕೊಳಿ ಅವರೊಂದಿಗೆ ಈ ಬಾರಿ ಸಹ ನೈಜೀರಿಯಾ ಸಮರ್ಥ ತಂಡವನ್ನೇ ಕ್ರೀಡಾಕೂಟಕ್ಕೆ ಕಳುಹಿಸಿದೆ.
ಕಳೆದ ನವೆಂಬರ್‌ನಲ್ಲಿ ಜೋಹಾನ್ನೆಸ್‌ಬರ್ಗ್‌ನಲ್ಲಿ ನಡೆದ 2013ರ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ನಲ್ಲೂ ಭಾರತ ಉತ್ತಮ ಪ್ರದರ್ಶನ ತೋರಿದೆ. ಅಲ್ಲದೆ, ಭಾರತದ ಹಲವಾರು ಲಿಫ್ಟರ್‌ಗಳು ಕಾಮನ್‌ವೆಲ್ತ್ ರ್ಯಾಂಕಿಂಗ್‌ನ ಅಗ್ರ ಮೂರನೇ ಸ್ಥಾನದಲ್ಲಿದ್ದಾರೆ. 2010ರಲ್ಲಿ ಪುರುಷರ 69ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಕೆ. ರವಿಕುಮಾರ್ ಅವರು ತಂಡದಲ್ಲಿದ್ದಾರೆ. ಆದರೆ, ಈ ಬಾರಿ 77ಕೆಜಿ ವಿಭಾಗದಲ್ಲಿ ಭಾಗವಹಿಸಿರುವ ಅವರು, ಗಾಯಗೊಂಡಿರುವ ಕಾರಣ ಚಿನ್ನದ ಪದಕ ಗೆಲ್ಲುವ ನಿರೀಕ್ಷೆ ಇಲ್ಲ.
ಖುಮುಕ್ಚಾಮ್ ಸಂಜಿತಾ ಮತ್ತು ಸಾಯಿಖೋಮ್ ಮೀರಾಬಾಯಿ ಚಾನು ಅವರು ಮಹಿಳೆಯರ 48ಕೆಜಿ ವಿಭಾಗದಲ್ಲಿ ಭಾಗವಹಿಸಲಿದ್ದಾರೆ. ಭಾರತ ಈ ವಿಭಾಗದಲ್ಲಿ ಪದಕ ಗೆಲ್ಲುವ ಅವಕಾಶ ಹೊಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement