ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಏಷ್ಯನ್ ಗೇಮ್ಸ್‌ಗೆ ರಾಜ್ಯದ ಮೂವರು ಕುದುರೆ ಸವಾರರು

Vishwanath S
Updated On : 25 Jul 2014, 12:28 pm

ಬೆಂಗಳೂರು: ಮುಂಬರುವ 17ನೇ ಏಷ್ಯನ್ ಕ್ರೀಡಾಕೂಟಕ್ಕೆ ಕರ್ನಾಟಕದ ಮೂವರು ಕುದುರೆ ಸವಾರರು ಆಯ್ಕೆಯಾಗಿದ್ದಾರೆ.
ಸೆಪ್ಟೆಂಬರ್ 19ರಿಂದ ಅಕ್ಟೋಬರ್ 4ರವರೆಗೆ ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ ಕ್ರೀಡಾಕೂಟದಲ್ಲಿ ರಾಜ್ಯದ ಅಜೈ ಅಪ್ಪಚ್ಚು, ಫೌವುದ್ ಮಿರ್ಜಾ ಹಾಗೂ ನಾಡಿಯಾ ಹರಿದಾಸ್ ಅವರು ತಮ್ಮ ಹೋರಾಟ ನಡೆಸಲಿದ್ದಾರೆ. ಈ ಸವಾರರು ಬೆಂಗಳೂರು ಎಂಬೆಸ್ಸಿ ಅಂತಾರಾಷ್ಟ್ರೀಯ ರೈಡಿಂಗ್ ಸ್ಕೂಲ್‌ನಲ್ಲಿ (ಇಐಆರ್‌ಎಸ್) ತರಬೇತಿ ಪಡೆದಿದ್ದಾರೆ. ಕಳೆದ ವರ್ಷ ಅಕ್ಟೋಬರ್‌ನಿಂದ ಈ ವರ್ಷ ಏಪ್ರಿಲ್‌ವರೆಗೆ ನಡೆದ ಐದು ಅರ್ಹತಾ ಸುತ್ತಿನ ಪಂದ್ಯಾವಳಿಗಳಲ್ಲಿ ಭಾಗವಹಿಸುವ ಮೂಲಕ ಪ್ರತಿಷ್ಠಿತ ಪಂದ್ಯಾವಳಿಗೆ ಪ್ರವೇಶ ಗಿಟ್ಟಿಸಿದ್ದಾರೆ. ಜಂಪಿಂಗ್, ಡ್ರೆಸೇಜ್ ಹಾಗೂ ಈವೆಂಟಿಂಗ್ ಸೇರಿದಂತೆ ಪ್ರತಿಯೊಂದು ವಿಭಾಗಕ್ಕೂ ಆಯ್ಕೆ ಮಾಡಲು ಐವರು ತೀರ್ಪುಗಾರರು ಭಾಗವಹಿಸಿದ್ದರು.
ಅಪ್ಪಚ್ಚು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪದಕ ಗಿಟ್ಟಿಸಿದ್ದಾರೆ. ಇತ್ತೀಚೆಗೆ ಅವರು ಸ್ಕಾಲ್ಟೆಂಡ್‌ನ ಹೋಪ್‌ಟೌನ್ ಕಾಮನ್‌ವೆಲ್ತ್ ಕಪ್‌ನಲ್ಲಿ ದ್ವಿತೀಯ ಸ್ಥಾನ ಗಿಟ್ಟಿಸಿದ್ದರು. ಅವರು ಬೆಂಗಳೂರು ಇಐಆರ್‌ಎಸ್‌ನಲ್ಲಿ ಯುವ ಪ್ರತಿಭೆಗಳಿಗೆ ತರಬೇತುದಾರರೂ ಆಗಿದ್ದಾರೆ. 22 ವರ್ಷದ ಮಿರ್ಜಾ ಅವರು ಹೋಪ್‌ಟೌನ್‌ನಲ್ಲಿ ನಾಲ್ಕನೇ ಸ್ಥಾನ ಪಡೆದರೆ, ನಾಡಿಯಾ ಅವರು ಅಂತಾರಾಷ್ಟ್ರೀಯ ಡ್ರೆಸೇಜ್ ವಿಭಾಗದಲ್ಲಿ ಸ್ಥಿರ ಪ್ರದರ್ಶನ ತೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement