ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಭಾರತ ಘಾನಾಭಜಾನ

Vishwanath S
Updated On : 25 Jul 2014, 12:28 pm

ಗ್ಲಾಸ್ಗೊ: ಭಾರತ ಬ್ಯಾಡ್ಮಿಂಟನ್ ತಂಡ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಶುಭಾರಂಭ ಮಾಡಿದೆ. ಗುರುವಾರ ನಡೆದ 'ಬಿ' ಗುಂಪಿನ ಮಿಶ್ರ ತಂಡ ವಿಭಾಗದಲ್ಲಿ ದುರ್ಬಲ ಘಾನಾ ವಿರುದ್ಧ 5-0 ಅಂತರದಿಂದ ಜಯ ಸಾಧಿಸಿತು.
 ಪರುಪಳ್ಳಿ ಕಶ್ಯಪ್ ಅವರು 27 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಘಾನಾದ ಡ್ಯಾನಿಯಲ್ ಸ್ಯಾಮ್ ಅವರನ್ನು 21-6, 21-16 ನೇರ ಗೇಮ್‌ಗಳ ಅಂತರದಿಂದ ಪರಾಭವಗೊಳಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ನಂತರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದ ಪಿ.ವಿ ಸಿಂಧು ಅವರು, ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಘಾನಾದ ಸ್ಟೆಲ್ಲಾ ಅಮಾಸಾ ಅವರನ್ನು 21-7, 21-5 ಗೇಮ್‌ಗಳಿಂದ ಸುಲಭವಾಗಿ ಮಣಿಸಿದರು. ಆಗ ಭಾರತ 2-0 ಅಂತರದಿಂದ ಮುನ್ನಡೆ ಕಂಡುಕೊಂಡಿತು.
  ಇನ್ನು ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ಅಕ್ಷಯ್ ದೇವಾಲ್ಕರ್ ಮತ್ತು ಪ್ರಣವ್ ಚೋಪ್ರಾ ಜೋಡಿ, ಘಾನಾದ ಎಮ್ಮಾನ್ಯೂಯಲ್ ಡೊಂಕೊರ್ ಮತ್ತು ಅಬ್ರಾಹಮ್ ಜೋಡಿಯನ್ನು 21-7, 21-11 ಗೇಮ್‌ಗಳಿಂದ ಸೋಲಿಸಿತು. ಅಲ್ಲಿಗೆ ಭಾರತ 3-0 ಅಂತರದಿಂದ ಸಂಪೂರ್ಣವಾಗಿ ಮೇಲುಗೈ ಸಾಧಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement