ಸ್ವರ್ಣ ತಂದ ಸಂಜಿತಾ
ವೇಟ್‌ಲಿಫ್ಟರ್ ಖುಮುಕ್‌ಚಾಮ್ ಸಂಜಿತಾ ಚಾನು ಅವರು 20ನೇ ಕಾಮನ್‌ವೆಲ್ತ್ ...
ಗ್ಲಾಸ್ಗೊ: ವೇಟ್‌ಲಿಫ್ಟರ್ ಖುಮುಕ್‌ಚಾಮ್ ಸಂಜಿತಾ ಚಾನು ಅವರು 20ನೇ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟರು. ನಿರೀಕ್ಷೆಯಂತೆ ವೇಟ್‌ಲಿಫ್ಟಿಂಗ್ ವಿಭಾಗದ 48ಕೆಜಿ ವಿಭಾಗದಲ್ಲಿ ಭಾರತಕ್ಕೆ ಮೊದಲ ದಿನವೇ ಎರಡು ಪದಕಗಳು ಬಂದಿವೆ. ಇನ್ನೊಬ್ಬ ವೇಟ್‌ಲಿಫ್ಟರ್ ಸೈಖೋಮ್ ಮೀರಾಬಾಯಿ ಚಾನು ಅವರು ಬೆಳ್ಳಿ ಗೆದ್ದುಕೊಂಡರು.
ಸಂಜಿತಾ ಅವರು 173ಕೆಜಿ (77+96) ಭಾರ ಎತ್ತುವ ಮೂಲಕ ಚಿನ್ನದ ಪದಕ ಗೆದ್ದುಕೊಂಡರೆ, ಮೀರಾಬಾಯಿ ಅವರು 170ಕೆಜಿ (75+95) ಭಾರ ಎತ್ತುವ ಮೂಲಕ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಈ ವಿಭಾಗದಲ್ಲಿ ಬಲಿಷ್ಠ ಸ್ಪರ್ಧಿಗಳ ಅನುಪಸ್ಥಿತಿ ಭಾರತದ ವೇಟ್‌ಲಿಫ್ಟರ್‌ಗಳಿಗೆ ಅನುಕೂಲವಾಗಿಪರಿಣಮಿಸಿತು ಎನ್ನಲಾಗಿದೆ.
ಇನ್ನು 162ಕೆಜಿ (70+92) ಭಾರ ಎತ್ತಿದ ನೈಜೀರಿಯಾದ ಕೆಚಿ ಒಪಾರಾ ಅವರು ಮೂರನೇ ಸ್ಥಾನ ಗಿಟ್ಟಿಸಿಕೊಂಡರು.
ಸಂಜಿತಾ ಅವರು ಇನ್ನೂ ಮೂರು ಕೆಜಿ ಭಾರ ಎತ್ತಿದ್ದರೆ, ಡೆಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದ ಆಸ್ಟ್ರೇಲಿಯಾದ ಅಗಸ್ಟಿನಾ ಕೆಮ್ ನ್ವಾವೊಕೊಲೊ ಅವರ ದಾಖಲೆಯನ್ನು ಅಳಿಸುತ್ತಿದ್ದರು. ಸ್ನ್ಯಾಚ್ ವಿಭಾಗದಲ್ಲಿ (77ಕೆಜಿ) ಸಂಜಿತಾ ಅವರು ನ್ವಾವೊಕೊಲೊ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಕುಂಜರಾಣಿ ದೇವಿ ಅವರ ಕಾಲದಿಂದಲೇ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಪಾರಮ್ಯ ಮೆರೆದಿರುವ ಈ ವಿಭಾಗದಲ್ಲಿ, ಆರಂಭದಿಂದಲೂ ಮಣಿಪುರದ ಇಬ್ಬರ ಸ್ಪರ್ಧಿಗಳ ನಡುವೆ ಹೆಚ್ಚು ಪೈಪೋಟಿ ಇತ್ತು.