ಎರಡನೇ ಟೆಸ್ಟ್: ಲಂಕಾ ನಿಯಂತ್ರಣದಲ್ಲಿ ಹರಿಣ
ಕೊಲಂಬೊ: ಹಿರಿಯ ಆಟಗಾರ ಮಹೆಲ ಜಯವರ್ದನೆ (165) ಹಾಗೂ ಅವರ ನಿರೋಶನ್ ಡಿಕ್‌ವೆಲ್ಲಾ (72) ಆಕರ್ಷಕ ಬ್ಯಾಟಿಂಗ್ ನೆರವಿನೊಂದಿಗೆ ಬೃಹತ್ ಮೊತ್ತವನ್ನು ಕಲೆಹಾಕಿರುವ ಆತಿಥೇಯ ಶ್ರೀಲಂಕಾ ತಂಡ, ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ನಿಯಂತ್ರಣ ಸಾಧಿಸಿದೆ.
ಶುಕ್ರವಾರ ಸಿಂಹಳೆಸೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಪಂದ್ಯದ ಎರಡನೇ ದಿನದಾಟದಲ್ಲಿ ಶ್ರೀಲಂಕಾ ತಂಡ 421 ರನ್‌ಗಳಿಗೆ ತನ್ನ ಮೊದಲ ಇನಿಂಗ್ಸ್ ಅಂತ್ಯಗೊಳಿಸಿತು. ನಂತರ ಇನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡ ದಿನದಾಟ ಮುಕ್ತಾಯದ ವೇಳೆಗೆ 3 ವಿಕೆಟ್ ಕಳೆದುಕೊಂಡು 93 ರನ್ ಕಲೆಹಾಕಿತು.
ಮೊದಲ ದಿನದಾಟ ಮುಕ್ತಾಯಕ್ಕೆ 5 ವಿಕೆಟ್ ಕಳೆದುಕೊಂಡು 305ರನ್ ಗಳಿಸಿದ್ದ ಲಂಕಾ, ಎರಡನೇ ದಿನದಾಟವು ಬ್ಯಾಟಿಂಗ್ ಮುಂದುವರಿಸಿತು. ಜಯವರ್ದನೆ 17 ಬೌಂಡರಿ, 1 ಸಿಕ್ಸರ್ ನೆರವಿನಿಂದ 165 ರನ್ ದಾಖಲಿಸಿದರೆ, ಡಿಕ್‌ವೆಲ್ಲಾ 8 ಬೌಂಡರಿ, 1 ಸಿಕ್ಸರ್ ನೆರವಿನಿಂದ 72 ರನ್ ದಾಖಲಿಸಿದರು. ಈ ಮೂಲಕ ಲಂಕಾ 400ರ ಗಡಿದಾಟುವಲ್ಲಿ ಯಶಸ್ವಿಯಾಯಿತು.
ಆರಂಭಿಕ ಆಘಾತ: ಮೊದಲ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ಆರಂಭಿಕರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ತಂಡದ ಮೊತ್ತ 13 ರನ್ ಆಗುಳಷ್ಟರಲ್ಲೇ ಆಲ್ವಿರೊ ಪೀಟರ್‌ಸನ್ (2) ಹಾಗೂ ಡೀನ್ ಎಲ್ಗರ್ (1) ವಿಕೆಟ್ ಕೈಚೆಲ್ಲಿದರು. ನಂತರ 36 ರನ್‌ಗಳಿಸಿದ್ದ ಡುಪ್ಲೆಸಿಸ್ ಸಹ ವಿಕೆಟ್ ಒಪ್ಪಿಸಿದರು. ಈ ವೇಳೆ ಜತೆಯಾದ ಹಶೀಂ ಆಮ್ಲಾ (46) ಹಾಗೂ ಡಿವಿಲಿಯರ್ಸ್ (11) ಕ್ರೀಸ್‌ನಲ್ಲಿದ್ದು, ತಂಡದ ಹೋರಾಟವನ್ನು ಮುಂದುವರಿಸಿದ್ದಾರೆ.
ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ ಮೊದಲ ಇನಿಂಗ್ಸ್ 421
(ಜಯವರ್ದನೆ 165, ಡಿಕ್‌ವೆಲ್ಲಾ 72, ಫಿಲ್ಯಾಂಡರ್ 52ಕ್ಕೆ2, ಸ್ಟೇಯ್ನ್ 69ಕ್ಕೆ2)
ದ.ಆಫ್ರಿಕಾ ಮೊದಲ ಇನಿಂಗ್ಸ್ 3 ವಿಕೆಟ್‌ಗೆ 93 (ಎರಡನೇ ದಿನದಾಟ ಅಂತ್ಯಕ್ಕೆ)
(ಆಮ್ಲಾ ಬ್ಯಾಟಿಂಗ್ 46, ಡುಪ್ಲೆಸಿಸ್ 36, ಲಕ್ಮಲ್ 13ಕ್ಕೆ1, ಹೆರಾಥ್ 16ಕ್ಕೆ1)