ಇಂದಿನಿಂದ ಅಥ್ಲೆಟಿಕ್ಸ್ಪದಕಗಳು ಬಲು ಭಾರ
ಗ್ಲಾಸ್ಗೋ: ಕಾಮನ್ವೆಲ್ತ್ ಕ್ರೀಡಾಕೂಟದ ಅತ್ಯಂತ ಮಹತ್ವದ ಭಾಗವಾಗಿರುವ ಆಥ್ಲೆಟಿಕ್ಸ್ ಸ್ಪರ್ಧೆಗಳು ಭಾನುವಾರದಿಂದ ಆರಂಭವಾಗಲಿದ್ದು, ಭಾರತದ ಕ್ರೀಡಾಪಟುಗಳು ಪದಕ ಗೆದ್ದುಕೊಳ್ಳುವ ದೊಡ್ಡ ಕನಸು ಹೊತ್ತು ಅಖಾಡದಲ್ಲಿ ನಿಂತಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ತವರಿನಲ್ಲಿಯೇ ನಡೆದ 2010ರ ದೆಹಲಿ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಅಥ್ಲೀಟ್ಗಳು ಎರಡು ಚಿನ್ನದ ಪದಕ ಸೇರಿದಂತೆ ಒಟ್ಟು 12 ಪದಕಗಳನ್ನು ಗೆದ್ದು ಗಮನ ಸೆಳೆದಿದ್ದರು.
ಆದರೆ, ಈಗ ಸ್ಕಾಟ್ಲೆಂಡ್ ರಾಜಧಾನಿ ಗ್ಲಾಸ್ಗೋದಲ್ಲಿ ನಡೆಯುತ್ತಿರುವ 20ನೇ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಅಥ್ಲೀಟ್ಗಳು ಕಳೆದ ಬಾರಿ ಗೆದ್ದ ಪದಕಗಳ ಪೈಕಿ ಅರ್ಧದಷ್ಟು ಪದಕಗಳನ್ನೂ ಗೆದ್ದುಕೊಳ್ಳುವುದು ಅನುಮಾನವಾಗಿದೆ.
ಇತ್ತೀಚಿನ ದಿನಗಳಲ್ಲಿ ಭಾರತದ ಸ್ಟಾರ್ ಅಥ್ಲೀಟ್ಗಳೆಲ್ಲ ಉತ್ತಮ ಪ್ರದರ್ಶನ ನೀಡುವಲ್ಲಿ ವೈಫಲ್ಯ ಅನುಭವಿಸಿದ್ದು, ತಮ್ಮ ನೈಜ ಸಾಮರ್ಥ್ಯವನ್ನೇ ತೋರಲು ಪರದಾಡುತ್ತಿದ್ದಾರೆ. ಕೆಲವೇ ಅಥ್ಲೀಟ್ಗಳು ಹೊರತುಪಡಿಸಿ ಬಹುತೇಕ ಕ್ರೀಡಾಪಟುಗಳು ಅಲ್ಪಾವಧಿಯಲ್ಲಿಯೇ ತರಬೇತಿ ಪಡೆದು ತರಾತುರನೆ ಇಲ್ಲಿಗೆ ಆಗಮಿಸಿದ್ದು, ತಮಗೆ ಎದುರಾಗಲಿರುವ ಕಠಿಣ ಸವಾಲುಗಳನ್ನು ಸಮರ್ಥವಾಗಿ ಎದುರಿಸುವುದು ಕಷ್ಟವಾಗಲಿದೆ.
ಹಾಲಿ ಡಿಸ್ಕಸ್ ಥ್ರೋ ಚಾಂಪಿಯನ್ ಕೃಷ್ಣ ಪೂನಿಯಾ ಮತ್ತು ಸೀಮಾ ಪೂನಿಯಾ ಹಾಗೂ ಅಮೆರಿಕದಲ್ಲಿಯೇ ನೆಲೆಸಿರುವ ಪುರುಷರ ವಿಭಾಗದ ಡಿಸ್ಕಸ್ ಪಟು ವಿಕಾಸ್ ಗೌಡ ಅವರ ಮೇಲೆ ಪದಕದ ಭರವಸೆ ಇಡಬಹುದಾಗಿದೆ. ಒಟ್ಟು 32 ಕ್ರೀಡಾಪಟುಗಳು ಪದಕದ ಬೇಟೆಯಲ್ಲಿದ್ದು, ಯುವ ಓಟಗಾರ ಅರ್ಪಿಂದರ್ ಸಿಂಗ್ ಕೂಡ ಪುರುಷರ ತ್ರಿಬಲ್ ಜಿಗಿತದಲ್ಲಿ ಪದಕದ ಮೇಲೆ ಕಣ್ಣಿಟ್ಟಿದ್ದಾರೆ. ಇನ್ನು ಮಹಿಳೆಯರ 4್ಗ400 ರಿಲೇ ತಂಡಕ್ಕೂ ಸ್ವಲ್ಪ ಅವಕಾಶವಿದೆ.
ಭಾನುವಾರ ನಡೆಯಲಿರುವ ಪುರುಷರ ಶಾಟ್ಪಟ್ ಸ್ಪರ್ಧೆಯ ಅರ್ಹತಾ ಸುತ್ತಿನ ಮೂಲಕ ಭಾರತದ ಅಥ್ಲೀಟ್ಗಳ ಅಭಿಯಾನ ಆರಂಭವಾಗಲಿದೆ. ಈ ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ (20.69ಮೀ.) ಓಂ ಪ್ರಕಾಶ್ ಸಿಂಗ್ ಕರ್ಹಾನಾ ಸ್ಪರ್ಧೆಗಿಳಿಯಲಿದ್ದಾರೆ.
ಉಳಿದಂತೆ, ಶಾರಧಾ ನಾರಾಯಣ (ಮಹಿಳೆಯರ 100ಮೀ. ಹೀಟ್ಸ್) ಮತ್ತು ಎಂ.ಆರ್. ಪೂವಮ್ಮ (400ಮೀ. ಹೀಟ್ಸ್), ಅಶ್ವಿನಿ ಅಕ್ಕುಂಜೆ (4್ಗ100ಮೀ. ರಿಲೇ), ಟಿಂಟು ಲೂಕಾ (4್ಗ100ಮೀ. ರಿಲೇ), ಸಹನಾ ಕುಮಾರಿ (ಹೈಜಂಪ್), ಮಯೂಖಾ ಜಾನಿ (ಉದ್ದಜಿಗಿತ) ಸ್ಪರ್ಧಿಸಲಿದ್ದಾರೆ.
ತವರಿನ ಅಥ್ಲೀಟ್ಗಳು ಋತುವಿನ ಶ್ರೇಷ್ಠ ಪ್ರದರ್ಶನ ಮುಂದುವರಿಸಿಕೊಂಡು ಬಂದರೆ ತಮಗೆ ತೃಪ್ತಿಯಾಗಲಿದೆ. ಆದರೆ, ಎಷ್ಟು ಪದಕಗಳನ್ನು ಕ್ರೀಡಾಪಟುಗಳು ಗೆದ್ದುಕೊಳ್ಳುತ್ತಾರೆ ಎಂದು ಭವಿಷ್ಯ ನುಡಿಯಲಾರೆ ಎಂದು ಭಾರತ ತಂಡದ ಕೋಚ್ ಬಹಾದ್ದೂರ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.