ಬೆಂಗಳೂರಿಗೆ ಟೆಸ್ಟ್ ಆತಿಥ್ಯ
ನವದೆಹಲಿ: ಇದೇ ವರ್ಷ ಅಕ್ಟೋಬರ್ ಹಾಗೂ ನವೆಂಬರ್ನಲ್ಲಿ ವೆಸ್ಟ್ ಇಂಡೀಸ್ ತಂಡ ಭಾರತ ಪ್ರವಾಸ ಕೈಗೊಳ್ಳಲಿದ್ದು, ಮೂರು ಟೆಸ್ಟ್ ಪಂದ್ಯಗಳ ಪೈಕಿ ಬೆಂಗಳೂರು ಒಂದು ಪಂದ್ಯದ ಆತಿಥ್ಯ ವಹಿಸಲಿದೆ.
ಈ ಪ್ರವಾಸದಲ್ಲಿನ ಪಂದ್ಯಗಳಿಗೆ ಸ್ಥಳಗಳ ಪಟ್ಟಿಯನ್ನು ಸಿದ್ಧಪಡಿಸಿರುವ ಬಿಸಿಸಿಐ ಮೂರು ಟೆಸ್ಟ್ ಪಂದ್ಯಗಳ ಸರಣಿಗೆ ಬೆಂಗಳೂರು ಜತೆಗೆ ಅಹ್ಮದಾಬಾದ್ ಹಾಗೂ ಹೈದರಾಬಾದ್ಗೆ ಆತಿಥ್ಯದ ಅವಕಾಶ ನೀಡಲು ನಿರ್ಧರಿಸಿದೆ.
ಉಳಿದಂತೆ ಐದು ಏಕದಿನ ಪಂದ್ಯಗಳಿಗೆ ಕೋಲ್ಕತಾ, ವಿಶಾಖಪಟ್ಟಣ, ಕಟಕ್, ಧರ್ಮಶಾಲಾ ಮತ್ತು ಕೊಚ್ಚಿ ಆತಿಥ್ಯ ವಹಿಸಲಿವೆ. ಇನ್ನು ಏಕೈಕ ಟಿ20 ಪಂದ್ಯಾವಳಿಯನ್ನು ದೇಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಸಲು ಚಿಂತನೆ ನಡೆಸಿದೆ.
ಈ ಪ್ರವಾಸದ ಪಂದ್ಯಗಳ ನಿಗದಿತ ದಿನಾಂಕವನ್ನು ಇನ್ನಷ್ಟೇ ನಿರ್ಧರಿಸಬೇಕಿದೆ.