ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಭಾರತಕ್ಕೆ ಸ್ಕಾಟ್ಲೆಂಡ್ ತುತ್ತು

Vishwanath S
Updated On : 27 Jul 2014, 1:42 am

ಗ್ಲಾಸ್ಗೋ: ಭಾರತ ತಂಡ ಪುರುಷರ ಹಾಕಿ ಸ್ಪರ್ಧೆಯಲ್ಲಿ ಸತತ ಎರಡನೇ ಗೆಲವು ದಾಖಲಿಸಿದೆ. ಶನಿವಾರ ನಡೆದ ಎ ಗುಂಪಿನ ತಮ್ಮ ಎರಡನೇ ಪಂದ್ಯದಲ್ಲಿ ಭಾರತದ ಆಟಗಾರರು 6-2 ಗೋಲುಗಳಿಂದ ಆತಿಥೇಯ ಸ್ಕಾಟ್ಲೆಂಡ್ ತಂಡವನ್ನು ಪರಾಭವಗೊಳಿಸಿದರು.
ವಿಜೇತ ಭಾರತ ತಂಡದ ಪರ ಗುರ್ಬಾಜ್ ಸಿಂಗ್ 6ನೇ ನಿಮಿಷ, ರಘುನಾಥ್ ರಾಮಚಂದ್ರ 22ನೇ, 44ನೇ ನಿಮಿಷ, ರೂಪಿಂದರ್ ಸಿಂಗ್ 36ನೇ, 49ನೇ ಮತ್ತು ಗುರ್ವಿಂದರ್ ಚಾಂಡಿ 40ನೇ ನಿಮಿಷ ಗೋಲು ಗಳಿಸಿದರು. ಸ್ಕಾಟ್ಲೆಂಡ್ ತಂಡಕ್ಕೆ ಕೆನ್ನಿ ಬೇನ್ 56ನೇ ಮತ್ತು ನಿಕೋಲಸ್ ಪಾರ್ಕ್ಸ್ 68ನೇ ನಿಮಿಷ ಗೋಲು ಗಳಿಸಿಕೊಟ್ಟಿದ್ದು ಪ್ರಯೋಜನವಾಗಲಿಲ್ಲ. ವಿರಾಮದ ವೇಳೆಗೆ 2-0 ಗೋಲುಗಳಿಂದ ಮುನ್ನಡೆ ಸಾಧಿಸಿದ್ದ ಭಾರತ ಎರಡನೇ ಅವಧಿಯಲ್ಲೂ ಮಿಂಚಿನ ಆಟವಾಡಿ ಮತ್ತೆ 4 ಗೋಲು ಸಂಪಾದಿಸಿತು.
ಮೊದಲ ಪಂದ್ಯದಲ್ಲಿ ಭಾರತ 3-1 ಗೋಲುಗಳಿಂದ ವೇಲ್ಸ್ ತಂಡದ ವಿರುದ್ಧ ಜಯಗಳಿಸಿ ಶುಭಾರಂಭ ಮಾಡಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement