ರಾಹಿಗೆ ಸ್ವರ್ಣ, ಅನಿಶಾಗೆ ಬೆಳ್ಳಿ
ಗ್ಲಾಸ್ಗೋ: ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಶೂಟರ್ಗಳು ತಮ್ಮ ಪದಕದ ಬೇಟೆಯನ್ನು ಮುಂದುವರಿಸಿದ್ದು, ಮಹಿಳೆಯರ 25 ಮೀ. ಪಿಸ್ತೂಲ್ ವಿಭಾಗದಲ್ಲಿ ರಾಹಿ ಸಾಮೊಬಟ್ ಚಿನ್ನದ ಪದಕ ಪಡೆದರೆ, ಅನಿಶಾ ಸಯ್ಯದ್ ಬೆಳ್ಳಿ ಪದಕ ಪಡೆದರು. ಶನಿವಾರ ನಡೆದ ಫೈನಲ್ ಸುತ್ತಿನಲ್ಲಿ ಅತ್ಯದ್ಭುತ ಪ್ರದರ್ಶನ ತೋರಿದ ಭಾರತೀಯ ಮಹಿಳಾ ಶೂಟರ್ಗಳು ಸಂಪೂರ್ಣ ಪ್ರಾಬಲ್ಯ ಮೆರೆದರು.
ಆರಂಭದಿಂದಲೂ ಭಾರತದ ಶೂಟರ್ಗಳು ಉತ್ತಮ ಪ್ರದರ್ಶನ ನೀಡಿದ ಪರಿಣಾಮ ಆಸ್ಟ್ರೇಲಿಯಾದ ಲಲಿಟಾ ಯಹುಲೆಸ್ಕಾ ಕಂಚಿಗೆ ತೃಪ್ತಿಪಟ್ಟಿದ್ದಾರೆ. ಈ ಇಬ್ಬರೂ ಆಟಗಾರ್ತಿಯರು ಉಪಾಂತ್ಯದಲ್ಲಿ ಅಗ್ರ ಎರಡು ಸ್ಥಾನವನ್ನು ಪಡೆಯುವ ಮೂಲಕ ಪದಕದ ಸುತ್ತಿಗೆ ಪ್ರವೇಶಿಸಿದ್ದರು.