ಕೈಚೆಲ್ಲಿದ ಮಹಿಳಾ ಟಿಟಿ ತಂಡ
ಗ್ಲಾಸ್ಗೊ: ನಾಲ್ಕು ವರ್ಷಗಳ ಹಿಂದೆ ಡೆಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ರನ್ನರ್ ಅಪ್ ಸ್ಥಾನ ಪಡೆದಿದ್ದ ಭಾರತ ವನಿತೆಯರ ಟೇಬಲ್ ಟೆನಿಸ್ ತಂಡ, ಗ್ಲಾಸ್ಗೊ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕಕ್ಕಾಗಿ ನಡೆದ ಪ್ಲೇ ಆಫ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿ ಪದಕವಂಚಿತವಾಯಿತು.
ಎರಡು ಸಿಂಗಲ್ಸ್ ಪಂದ್ಯದಲ್ಲಿ ವಿಜಯ ಕಂಡ 23 ವರ್ಷದ ಜಿಯು ಝಂಗ್, ಆಸ್ಟ್ರೇಲಿಯಾದ ಜಯದ ರೂವಾರಿ ಎನಿಸಿದರು. ಭಾರತದ ಅನುಭವಿ ಶ್ಯಾಮಿನಿ ಕುಮಾರೆಸನ್ ಮತ್ತು ಮಾಧುರಿಕಾ ಪಾಟ್ಕರ್ ವಿರುದ್ಧ ನಡೆದ ಎರಡು ಸಿಂಗಲ್ಸ್ ಪಂದ್ಯಗಳಲ್ಲಿ ಝಂಗ್ ಮೇಲುಗೈ ಸಾಧಿಸಿದರು. ನಂತರ ನಡೆದ ಡಬಲ್ಸ್ ಪಂದ್ಯದಲ್ಲಿ ಪಾಟ್ಕರ್ ಮತ್ತು ಕುಮಾರಸನ್ ಅವರು ಆಸ್ಟ್ರೇಲಿಯಾದ ಜಿಯಾಂಗ್ ಫಾಂಗ್ ಲೇ ಮತ್ತು ಮಿಯಾವೋ ಮಿಯಾವೋ ಜೋಡಿ ವಿರುದ್ಧ 1-2 ಅಂತರದಿಂದ ಕೈಚೆಲ್ಲಿದರು.