ಜಡೇಜಾ ವಿರುದ್ಧ ಸ್ಟೋಕ್ಸ್, ಪ್ರಯರ್ ಸಾಕ್ಷ್ಯ
ಲಂಡನ್: ರವೀಂದ್ರ ಜಡೇಜಾ ಮತ್ತು ಜೇಮ್ಸ್ ಆ್ಯಂಡರ್ಸನ್ ನಡುವೆ ನಡೆದಿದೆ ಎನ್ನಲಾಗಿರುವ ಮಾತಿನ ಚಕಮಕಿ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಜೇಮ್ಸ್ ಆ್ಯಂಡರ್ಸನ್ ವಿರುದ್ಧ ಭಾರತದ ಆಲ್ರೌಂಡ್ ಆಟಗಾರ ಬ್ಯಾಟ್ ಎತ್ತಿದ್ದ ಎಂದು ಇಂಗ್ಲೆಂಡ್ ತಂಡದ ಇಬ್ಬರು ಆಟಗಾರರು ಸಾಕ್ಷ್ಯ ಹೇಳಿದ್ದಾರೆ.
ಮಾತಿನ ಚಕಮಕಿ ಸಂದರ್ಭ ಆ್ಯಂಡರ್ಸನ್‌ಗೆ ಜಡೇಜಾ ಬ್ಯಾಟ್ ಎತ್ತಿದ್ದರು. ಅದಕ್ಕಾಗಿ ಆತನಿಗೆ ಪಂದ್ಯ ಶುಲ್ಕದ ಶೇ. 50ರಷ್ಟು ದಂಡ ವಿಧಿಸಲಾಗಿದೆ ಎಂದು ಬೆನ್ ಸ್ಟೋಕ್ಸ್ ಮತ್ತು ಮ್ಯಾಟ್ ಪ್ರಯರ್ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ.
'ಜಡೇಜಾ ಬ್ಯಾಟ್‌ನೊಂದಿಗೆ ಆ್ಯಂಡರ್ಸನ್‌ಗೆ ಬೆದರಿಕೆಯೊಡ್ಡಿದರು. ಹೀಗಾಗಿ, ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಅವರು ಸ್ವಯಂರಕ್ಷಣೆಗೆ ಮುಂದಾದರು' ಎಂದು ವಿಚಾರಣೆ ವೇಳೆ ಇಂಗ್ಲೆಂಡ್ ಆಟಗಾರರು ಹೇಳಿರುವುದಾಗಿ ವೆಬ್‌ಸೈಟೊಂದು ವರದಿ ಮಾಡಿದೆ.