ಡೇನಿಯಲ್ ಚಾಂಪಿಯನ್
ಬುಡಾಪೆಸ್ಟ್: ಅಗ್ರಜರನ್ನ್ನು ಹಿಂದಿಕ್ಕಿದ ರೆಡ್ಬುಲ್ ಚಾಲಕ ಡೇನಿಯಲ್ ರಿಕಾರ್ಡೋ ಅವರು ಭಾನುವಾರ ನಡೆದ ಹಂಗರಿ ಗ್ರ್ಯಾನ್ ಪ್ರಿಕ್ಸ್ನಲ್ಲಿ ಚಾಂಪಿಯನ್ ಪಟ್ಟ ಮುಡಿಗೇಸಿಕೊಂಡಿರು. ಡೇನಿಯಲ್ಗೆ ಇದು ಋತುವಿನ 2ನೇ ಪ್ರಶಸ್ತಿಯಾಗಿತ್ತು. ಫೆರಾರಿಯ ಫೆರ್ನಾಂಡೋ ಅಲಾನ್ಸೋ ದ್ವಿತೀಯ ಸ್ಥಾನ ಗಿಟ್ಟಿಸಿದರೆ, ಮರ್ಸಿಡೀಸ್ನ ಲೂಯಿಸ್ ಹ್ಯಾಮಿಲ್ಟನ್ 3ನೇ ಸ್ಥಾನ ತಮ್ಮದಾಗಿಸಿಕೊಂಡರು.
ನಿವೃತ್ತಿ ಪಡೆದ ಫೋರ್ಸ್ ಇಂಡಿಯಾ: ಅಪಘಾತದ ಹಿನ್ನ್ನೆಲೆಯಲ್ಲಿ ಸಹರಾ ಫೋರ್ಸ್ ಇಂಡಿಯಾ ತಂಡದ ಇಬ್ಬರೂ ಚಾಲಕರು ಸ್ಪರ್ಧೆಯಿಂದ ಹಿಂದೆ ಸರಿದಿದ್ದರು.