ದಾದಾ ಹೊಸ ಇನಿಂಗ್ಸ್ ಶುರು
ಕೋಲ್ಕತಾ: ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರು, ಕ್ರಿಕೆಟ್ ಆಡಳಿತದಲ್ಲಿ ಭಾನುವಾರ ಹೊಸ ಇನಿಂಗ್ಸ್ ಆರಂಭಿಸಿದರು. ಬಂಗಾಳ ಕ್ರಿಕೆಟ್ ಸಂಸ್ಥೆಯ 83ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಗಂಗೂಲಿ ಜಂಟಿ ಕಾರ್ಯದರ್ಶಿವಾಗಿ ಅವಿರೋಧವಾಗಿ ಆಯ್ಕೆಯಾಗಿ,ಹೊಸ ಇನಿಂಗ್ಸ್ ಆರಂಭಿಸಿದ್ದಾರೆ.
ತಮ್ಮ ನಾಯಕತ್ವದಲ್ಲಿ ಭಾರತ ಕ್ರಿಕೆಟ್ ತಂಡವನ್ನು 2003ರ ವಿಶ್ವಕಪ್ ಫೈನಲ್ ತಲುಪಿಸಿದ್ದ ಗಂಗೂಲಿ, ಹಿರಿಯ ಕ್ರಿಕೆಟಿಗರಾದ ದಿಲೀಪ್ ವೆಂಗ್ಸರ್ಕಾರ್, ಜಾವ್ಗಲ್ ಶ್ರೀನಾಥ್,ಅನಿಲ್ ಕುಂಬ್ಳೆ ಅವರ ಹಾದಿಯನ್ನೇ ಹಿಡಿದ್ದಾರೆ.
ಗಂಗೂಲಿ ಸ್ಪರ್ಧಿಸಿದ್ದ ಸಹ ಕರ್ಯಾದರ್ಶಿ ಸ್ಥಾನಕ್ಕೆ, ಯಾವುದೇ ಪ್ರತಿಸ್ಪರ್ಧಿಗಳು ಭಾಗವಹಿಸಿರಲಿಲ್ಲ.