ಮೊಹ್ಮದ್ ಅಸಬ್‌ಗೆ ಕಂಚು
ಈ ಮಧ್ಯೆ ಪುರುಷರ ಡಬಲ್ ಟ್ರ್ಯಾಪ್ ವಿಭಾಗದಲ್ಲಿ ಕೂಡ ಭಾರತಕ್ಕೆ ಕಂಚಿನ ಪದಕ ಸಂಪಾದನೆಯಾಗಿದೆ.
ಇಂದೇ ನಡೆದ ಈ ಸ್ಪರ್ಧೆಯಲ್ಲಿ 26ರ ಗುರಿಕಾರ ಮೊಹ್ಮದ್ ಅಸಬ್ ಈ ಸಾಧನೆ ಮಾಡಿದರು. ಮೀರತ್ ಮೂಲದ ಅಸಬ್ ಅವರು ಮಾಲ್ಟಾದ ನಾಥನ್ ಕ್ಸೇರಬ್‌ರನ್ನು ಸೋಲಿಸಿ ಮೂರನೇ ಸ್ಥಾನದ ಗೌರವ ಪಡೆದರು.
ಅರ್ಹತಾ ಹಂತದಲ್ಲಿ ಐದನೇ ಸ್ಥಾನ ಹೊಂದಿದ್ದ ಅಸಬ್, ಫೈನಲ್ಸ್‌ನಲ್ಲಿ ಮಾತ್ರ 26 ಅಂಕ ಸಂಪಾದಿಸಿ ಪದಕಕ್ಕೆ ಭಾಜನರಾದರು. ಎದುರಾಳಿ ನಾಥನ್ 24 ಅಂಕಗಳಿಸಿ ಪದಕದಿಂದ ವಂಚಿತರಾದರು. ಇದೇ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಭಾರತದ ಮತ್ತೊಬ್ಬ ಗುರಿಕಾರ ಫೈನಲ್‌ನಲ್ಲಿ 5ನೇ ಸ್ಥಾನಕ್ಕೆ ಸಮಾಧಾನಗೊಂಡು ನಿರಾಸೆ ಅನುಭವಿಸಿದರು.