ಸೆಮೀಸ್ಗೆ ಈಜಿದ ಸಂದೀಪ್
ಗ್ಲಾಸ್ಗೋ: ಭಾರತದ ಈಜುಗಾರ ಸಂದೀಪ್ ಸೆಜ್ವಾಲ್ 50 ಮೀಟರ್ ಬ್ರೆಸ್ಟ್ಸ್ಟ್ರೋಕ್ ಸ್ಪರ್ಧೆಯಲ್ಲಿ ಸೆಮಿಫೈನಲ್ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಟಾಲ್ಕ್ರಾಸ್ ಈಜು ಕೇಂದ್ರದಲ್ಲಿ ಭಾನುವಾರ ನಡೆದ ಹೀಟ್ಸ್ ಸ್ಪರ್ಧೆಯಲ್ಲಿ ಸಂದೀಪ್ ಮೂರನೇ ಸ್ಥಾನ ಪಡೆಯುವ ಮೂಲಕ ಸೆಮಿಫೈನಲ್ ಪ್ರವೇಶಿಸಿದರು. ಹೀಟ್ಸ್ 3ರಲ್ಲಿ ಪಾಲ್ಗೊಂಡಿದ್ದ ಅವರು ದೂರವನ್ನು 28.17 ಸೆಕೆಂಡುಗಳಲ್ಲಿ ಕ್ರಮಿಸಿದರು. ಸಂದೀಪ್ನ ಪ್ರತಿಸ್ಪರ್ಧಿಗಳಾದ ಸ್ಕಾಟ್ಲೆಂಡ್ನ ಮಾರ್ಕ್ ಟುಲ್ಲಿ 27.22 ಸೆ. ಹಾಗೂ ನ್ಯೂಜಿಲೆಂಡ್ನ ಗ್ಲೆನ್ ಸ್ನೈಡರ್ಸ್ 27.45 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಕ್ರಮವಾಗಿ ಮೊದಲೆರೆಡು ಸ್ಥಾನಗಳೊಂದಿಗೆ ಮುಂದಿನ ಹಂತಕ್ಕೆ ಸಾಗಿದರು.
ಈ ಮಧ್ಯೆ 100 ಮೀಟರ್ ಬಟರ್ಫ್ಲೈನಲ್ಲಿ ಸ್ಪರ್ಧೆಗಳಿದಿದ್ದ ಭಾರತದ ಮತ್ತೊಬ್ಬ ಈಜುಗಾರ ಸಾಜನ್ ಪ್ರಕಾಶ್, ತಮ್ಮ 5ನೇ ಹೀಟ್ಸ್ನಲ್ಲಿ 55.58 ಸೆ.ಗಳಲ್ಲಿ ಗುರಿ ಕ್ರಮಿಸಿ ಆರನೇ ಸ್ಥಾನ ಪಡೆಯುವುದರೊಂದಿಗೆ ಭಾರಿ ನಿರಾಸೆ ಅನುಭವಿಸಿದರು.