ಸೆಮೀಸ್ಗೆ ಘೋಶಾಲ್, ದೀಪಿಕಾ ಔಟ್
ಗ್ಲಾಸ್ಗೋ: ಭಾರತದ ಸ್ಕ್ವಾಶ್ ಕ್ರೀಡೆಯ ಸ್ಟಾರ್ ಪ್ರತಿಭೆಗಳಾದ ಸೌರವ್ ಘೋಶಾಲ್ 20ನೇ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಸಿಂಗಲ್ಸ್ನಲ್ಲಿ ಸೆಮಿಫೈನಲ್ ತಲುಪುವಲ್ಲಿ ಯಶಸ್ವಿಯಾಗಿದ್ದರೆ, ದೀಪಿಕಾ ಪಳ್ಳಿಕಲ್ ಪದಕದ ಬೇಟೆಯಿಂದ ಹೊರಬಿದ್ದಿದ್ದಾರೆ.
ಭಾನುವಾರ ನಡೆದ ಪುರುಷರ ಸಿಂಗಲ್ಸ್ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕಿತ ಸೌರವ್ ಘೋಶಾಲ್, 8-11, 7-11, 11-6, 11-8, 11-6 ಅಂಕಗಳಿಂದ 12ನೇ ಶ್ರೇಯಾಂಕಿತ ನ್ಯೂಜಿಲೆಂಡ್ನ ಕ್ಯಾಂಬೆಲ್ ಗ್ರೇಸನ್ರನ್ನು ಸೋಲಿಸಿ ಮುನ್ನಡೆ ಸಾಧಿಸಿದರು.
ಈ ಗೆಲವಿನೊಂದಿಗೆ ಘೋಶಾಲ್, ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಸ್ಕ್ವಾಶ್ ಕ್ರೀಡೆ (1998ರಲ್ಲಿ) ಸೇರ್ಪಡೆಗೊಂಡ ನಂತರ ಸೆಮಿಫೈನಲ್ ತಲುಪಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದರು.
ಆದರೆ, ಮಹಿಳೆಯರ ವಿಭಾಗದಲ್ಲಿ ಅಪಾರ ಭರವಸೆ ಮೂಡಿಸಿದ್ದ ತವರಿನ ಮತ್ತೊಬ್ಬ ಆಟಗಾರ್ತಿ ಆರನೇ ಶ್ರೇಯಾಂಕಿತೆ ದೀಪಿಕಾ ಪಳ್ಳಿಕಲ್ ತಮ್ಮ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ನ ಅಲಿಸನ್ ವಾಟರ್ಸ್ ಎದುರು 11-8, 2-11, 9-11, 6-11 ಅಂಕಗಳಿಂದ ಸೋತು ಪದಕದ ಆಸೆ ಕೈಬಿಟ್ಟರು.