13ರ ಪೋರಿಗೆ ಕಂಚಿನ ಗರಿ
ಕೇವಲ 13 ವರ್ಷದ ಪೊರಿಯೊಬ್ಬಳು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದು ದಾಖಲೆ ಬರೆದಿದ್ದಾಳೆ...
ಗ್ಲಾಸ್ಗೋ: ಕೇವಲ 13 ವರ್ಷದ ಪೊರಿಯೊಬ್ಬಳು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದು ದಾಖಲೆ ಬರೆದಿದ್ದಾಳೆ. ಮಹಿಳೆಯರ 100 ಮೀಟರ್ ಬ್ರೀಸ್ಟ್ಸ್ಟ್ರೋಕ್ ವಿಭಾಗದಲ್ಲಿ ಕಂಚು ಗೆದ್ದು ಈ ಸಾಧನೆ ಮಾಡಿದ್ದಾರೆ, ಆತಿಥೇಯ ಸ್ಕಾಟ್ಲೆಂಡ್ನ ಎರಾಯಿಡ್ ಡೇವಿಸ್. ಇದು ಕಾಮನ್ವೆಲ್ತ್ ಇತಿಹಾಸದಲ್ಲಿ ಪದಕ ಗೆದ್ದ ಅತಿ ಕಿರಿಯ ಅಥ್ಲೀಟ್ ಎಂಬ ದಾಖಲೆಯಾಗಿದೆ.ಇನ್ನೊಂದು ಅಚ್ಚರಿಯ ಅಂಶವೆಂದರೆ, ಡೇವಿಸ್ಗೆ 4ನೇ ವಯಸ್ಸಿನವರೆಗೂ ನಡೆಯಲಿಕ್ಕೆ ಬರುತ್ತಿರಲಿಲ್ಲವಂತೆ. ಇದರೊಂದಿಗೆ ಡೇವಿಸ್ ಅವರು ಸ್ಕಾಟ್ಲೆಂಡ್ನಲ್ಲಿ ರಾಷ್ಟ್ರೀಯ ಮಟ್ಟದ ಸಿಲೆಬ್ರೆಟಿ ಎನಿಸಿದ್ದಾರೆ.