ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಕನ್ನಡಿಗ ವಿಕಾಸ್‌ಗೆ ಚಿನ್ನ

ಶ್ರೇಷ್ಠ ಪ್ರದರ್ಶನ ತೋರಿದ ಕರ್ನಾಟಕದ ವಿಕಾಸ್ ಗೌಡ, ಪುರುಷರ ಡಿಸ್ಕಸ್ ...

Lingaraj Badiger
Updated On : 1 Aug 2014, 10:41 am

ಗ್ಲಾಸ್ಗೋ: ಶ್ರೇಷ್ಠ ಪ್ರದರ್ಶನ ತೋರಿದ ಕರ್ನಾಟಕದ ವಿಕಾಸ್ ಗೌಡ, ಪುರುಷರ ಡಿಸ್ಕಸ್ ಥ್ರೋ ವಿಭಾಗದಲ್ಲಿ ಚಿನ್ನದ ಪದಕ ಬಾಚಿಕೊಂಡರು. ಇದರೊಂದಿಗೆ 20ನೇ ಕಾಮನ್‌ವೆಲ್ತ್ ಕ್ರೀಡಾಕೂಟದ ಅಥ್ಲೆಟಿಕ್ಸ್ ವಿಭಾಗದಲ್ಲಿ ವಿಕಾಸ್, ಭಾರತಕ್ಕೆ ಮೊದಲ ಪದಕ ತಂದುಕೊಟ್ಟರು. 31 ವರ್ಷದ ವಿಕಾಸ್ ಗೌಡ ನಾಲ್ಕು ವರ್ಷಗಳ ಹಿಂದೆ ಡೆಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ತಾವು ಗೆದ್ದ ಬೆಳ್ಳಿ ಪದಕವನ್ನು ಈಗ ಚಿನ್ನವಾಗಿ ಪರಿವರ್ತಿಸಿಕೊಂಡಿದ್ದಾರೆ. 63.64 ಅಂತರ ಎಸೆದ ಗೌಡ ಅವರು ಚಿನ್ನ ಪದಕಕ್ಕೆ ಭಾಜನರಾದರು. ಈ ವಿಭಾಗದಲ್ಲಿ 63.32 ಮೀಟರ್ ಎಸೆದ ಸಿಪ್ರಿಯಾಟ್‌ನ ಅಪೊಸ್ಟೋಲಾಸ್ ಪಾರೆಲ್ಲೀಸ್ ಅವರು ಬೆಳ್ಳಿ ಗೆದ್ದುಕೊಂಡರು. ಇನ್ನು 62.34 ಮೀಟರ್ ದೂರ ಎಸೆದ ಜಮೈಕಾದ ಜಾಸನ್ ಮಾರ್ಗನ್ ಅವರು ಕಂಚಿನ ಪದಕ ತಮ್ಮದಾಗಿಸಿಕೊಂಡರು. ಬುಧವಾರ ನಡೆದ ಹೀಟ್ಸ್‌ನ ಮೊದಲ ಯತ್ನದಲ್ಲಿ 64.32 ಮೀಟರ್ ಅಂತರ ಎಸೆದಿದ್ದ ವಿಕಾಸ್ ಗೌಡ ಮೊದಲ ಸ್ಥಾನ ಗಿಟ್ಟಿಸುವ ಮೂಲಕ ಫೈನಲ್ ಪ್ರವೇಶಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement