ತಿರುವು ನೀಡಿದ ತಿವಾರಿ: ಕಂಗಾಲಾದ ಕಾಂಗರೂ
ಡಾರ್ವಿನ್: ಅರೆಕಾಲಿಕ ಲೆಗ್ ಸ್ಪಿನ್ನರ್ ಮನೋಜ್ ತಿವಾರಿ (5 ವಿಕೆಟ್) ಮೋಡಿಯನ್ನು ಅರಿಯದ ಆಸ್ಟ್ರೇಲಿಯಾ 'ಎ' ತಂಡ ಚುತುಷ್ಕೋನ ಏಕದಿನ ಸರಣಿಯಲ್ಲಿ ಭಾರತ ವಿರುದ್ಧ 5 ವಿಕೆಟ್ಗಳಿಂದ ಸೋಲನುಭವಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ 49.4 ಓವರ್ಗಳಲ್ಲಿ 228 ರನ್ಗಳಿಗೆ ಆಲೌಟ್ ಆಯಿತು. ಈ ಮೊತ್ತವನ್ನು ಬೆನ್ನಟ್ಟಿದ ಭಾರತ 47.5 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 231 ರನ್ ದಾಖಲಿಸುವ ಮೂಲಕ ಗೆಲವಿನ ದಡ ಸೇರಿತು. ಇನ್ನು ರೌಡ್ ರಾಬಿನ್ ಮಾದರಿಯ ಪಂದ್ಯಾವಳಿಯಲ್ಲಿ ಅಗ್ರ ಎರಡು ಸ್ಥಾನ ಪಡೆದಿರುವ ಭಾರತ ಹಾಗೂ ಆಸ್ಟ್ರೇಲಿಯಾ ಶನಿವಾರ ಫೈನಲ್ ಪಂದ್ಯದಲ್ಲಿ ಕಾದಾಟ ನಡೆಸಲಿವೆ.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ 49.4 ಓವರ್ಗಳಲ್ಲಿ 228
(ಮಾರ್ಕಸ್ ಸ್ಟೋಯ್ನಿಸ್ 58, ಹಾಗೂ ಫಿಲ್ ಹ್ಯೂಸ್ 58, ತಿವಾರಿ 34ಕ್ಕೆ5)
ಭಾರತ 47.5 ಓವರ್ಗಳಲ್ಲಿ 231 /5
(ರಾಯುಡು 77, ಜಾಧವ್ 52, ಸ್ಯಾಮನ್ 49, ಮೆಕೆ 19ಕ್ಕೆ1)