ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಬಂಗಾರಿ ಬಬಿತಾ

ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪರ ಕುಸ್ತಿಪಟುಗಳು ಪದಕ ಕೊಳ್ಳೆ ಹೊಡೆಯುವುದನ್ನು...

Rashmi Kasaragodu
Updated On : 1 Aug 2014, 12:19 pm

ಗ್ಲಾಸ್ಗೋ: ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪರ ಕುಸ್ತಿಪಟುಗಳು ಪದಕ ಕೊಳ್ಳೆ ಹೊಡೆಯುವುದನ್ನು ಮುಂದುವರಿಸಿದ್ದು, ಮಹಿಳಾ ಕುಸ್ತಿಪಟು ಬಬಿತಾ ಕುಮಾರಿ ಚಿನ್ನದ ಪದಕಕ್ಕೆ ಕೊರಳೊಡಿದ್ದಾರೆ. ಗುರುವಾರ ನಡೆದ ಮಹಿಳೆಯರ 55 ಕೆ.ಜಿ ಫ್ರೀ ಸ್ಟೈಲ್ ವಿಭಾಗದಲ್ಲಿ ಬಬಿತಾ ಕುಮಾರಿ ತಮ್ಮ ಎದುರಾಳಿ ಕೆನಡಾದ ಆಟಗಾರ್ತಿ ಬ್ರಿಟೆನಿ ಲಾವೆಂಡರೆ ವಿರುದ್ಧ 9-2 ಅಂಕಗಳ ಅಂತರದಲ್ಲಿ ಗೆಲವು ದಾಖಲಿಸಿದ್ದಾರೆ. ಆರಂಭದಿಂದಲೂ ಕೆನಡಾ ಆಟಗಾರ್ತಿ ಮೇಲೆ ಪ್ರಭುತ್ವ ಸಾಧಿಸಿದ ಬಬಿತಾ, ಯಾವ ಹಂತದಲ್ಲೂ ಚೇತರಿಸಿಕೊಳ್ಳಲು ಅವಕಾಶ ನೀಡಲಿಲ್ಲ. ಈ ಮೂಲಕ ಪ್ರಸಕ್ತ ಕ್ರೀಡಾಕೂಟದಲ್ಲಿ ಕುಸ್ತಿಯಿಂದ ನಾಲ್ಕನೇ ಪದಕ ಭಾರತದ ಪಾಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement