ಹಾಕಿ: ವನಿತೆಯರಿಗೆ ಸ್ಕಾಟ್ಲೆಂಡ್ ಸವಾಲು
ಗ್ಲಾಸ್ಗೋ: ಭಾರತದ ಮಹಿಳಾ ತಂಡದ ಆಟಗಾರ್ತಿಯರು ಇದೀಗ 5-6ನೇ ಸ್ಥಾನಕ್ಕಾಗಿ ಶುಕ್ರವಾರ ನಡೆಯಲಿರುವ ಹಾಕಿ ಪಂದ್ಯದಲ್ಲಿ ಆತಿಥೇಯ ಸ್ಕಾಟ್ಲೆಂಡ್ ತಂಡವನ್ನು ಎದುರಿಸಲಿದ್ದಾರೆ. ಸೆಮಿಫೈನಲ್ಗೆ ಅರ್ಹತೆ ಪಡೆಯಲು ವಿಫಲವಾಗಿರುವ ಭಾರತದ ವನಿತೆಯರು, ಈ ಮುನ್ನ ಚಾಂಪಿಯನ್ಸ್ ಚಾಲೆಂಜ್-1ರಲ್ಲಿ ಸ್ಕಾಟ್ಲೆಂಡ್ ಪಡೆಯನ್ನು ಎದುರಿಸಿದಾಗ 3-4 ಗೋಲುಗಳಿಂದ ಸೋಲನುಭವಿಸಿದ್ದರು. ಅಲ್ಲದೆ, 2006ರನೇ ಆವೃತ್ತಿಯ ಕಾಮನ್ವೆಲ್ತ್ ಕೂಟದಲ್ಲಿ ಸಹ ಪರಸ್ಪರ ಮುಖಾಮುಖಿಯಾದಾಗ ಭಾರತ 5-0 ಗೋಲುಗಳಿಂದ ಜಯ ಸಂಪಾದಿಸಿತ್ತು. ಆದರೆ, ಕಳೆದ 2010ರ ದೆಹಲಿ ಕ್ರೀಡಾಕೂಟದಲ್ಲಿ ಮಾತ್ರ ಭಾರತ-ಸ್ಕಾಟ್ಲೆಂಡ್ ಆಟಗಾರ್ತಿಯರು 1-1 ಗೋಲಿನಿಂದ ಡ್ರಾ ಫಲಿತಾಂಶಕ್ಕೆ ತೃಪ್ತಿ ಹೊಂದಿದ್ದರು.