ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಆಳ್ವಾಸ್ ತಂಡಕ್ಕೆ ಡಬಲ್ಸ್ ಪ್ರಶಸ್ತಿ

Rashmi Kasaragodu
Updated On : 5 Jun 2014, 1:18 am

ಮೂಡಬಿದಿರೆ: ಸ್ಥಳೀಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ತಂಡ ಅಖಿಲ ಭಾರತ ಆಹ್ವಾನಿತ ಬಾಲ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಡಬಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
ಮೂಡಬಿದಿರೆಯಲ್ಲಿ ನಡೆದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆಳ್ವಾಸ್ ತಂಡ 29-25, 29-19 ನೇರ ಅಂಕಗಳ ಅಂತರದಲ್ಲಿ ತಮಿಳುನಾಡಿನ ನಾಮಕ್ರಲ್ ಪಾವ್ಯೆ ಕ್ಲಬ್ ತಂಡವನ್ನು ಪರಾಭವಗೊಳಿಸಿತು. ಸೆಮಿಫೈನಲ್ಗಳಲ್ಲಿ ಆಳ್ವಾಸ್ ತಂಡ, ಆಳ್ವಾಸ್ 'ಬಿ' ತಂಡದ ವಿರುದ್ಧ ಜಯಗಳಿಸಿದರೆ, ನಾಮಕ್ರಲ್ ಪಾವ್ಯೆ ತಂಡ ಚೆನ್ನೈನ ಲೇಡಿ ಶಿವಸ್ವಾಮಿ ತಂಡವನ್ನು ಮಣಿಸಿ ಫೈನಲ್ ತಲುಪಿತ್ತು.
ರಾಷ್ಟ್ರದ ವಿವಿಧ ಭಾಗಗಳಿಂದ ಒಟ್ಟು 10 ತಂಡಗಳು ಟೂರ್ನಿಯಲ್ಲಿ ಪಾಲ್ಗೊಂಡಿದ್ದವು. ಚೆನ್ನೈನ ಕ್ರೆಸೆಂಟ್ ವಿವಿಯ ವಿದ್ಯಾ ಸರ್ವಾಂಗೀಣ ಆಟಗಾರ್ತಿಯ ಪ್ರಶಸ್ತಿ ಪಡೆದುಕೊಂಡರು. ರಾಜ್ಯ ಬಾಲ್ ಬ್ಯಾಡ್ಮಿಂಟನ್ ಸಂಸ್ಥೆ ಕಾರ್ಯದರ್ಶಿ ದಿನೇಶ್ ಪ್ರಶಸ್ತಿ ವಿತರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement