ಇಂಚಾನ್ ಏಷ್ಯನ್ ಗೇಮ್ಸ್: ಬೆಂಗಳೂರಿನಲ್ಲಿ ತರಬೇತಿಗೆ 30 ಪುಟ್ಬಾಲಿಗರ ಆಯ್ಕೆ
ನವದೆಹಲಿ: ಮುಂಬರುವ ಇಂಚಾನ್ ಏಷ್ಯನ್ ಗೇಮ್ಸ್ಗಾಗಿ ಭಾರತದಿಂದ ಸಮರ್ಥ ತಂಡ ಪಾಲ್ಗೊಳ್ಳಬೇಕೆಂಬ ಉದ್ದೇಶದಿಂದ ರಾಷ್ಟ್ರೀಯ ಫುಟ್ಬಾಲ್ ತಂಡದ ಕೋಚ್ ವಿಮ್ ಕೊವರ್ಮನ್ಸ್ ತರಬೇತಿ ಶಿಬಿರಕ್ಕೆ ಒಟ್ಟು 30 ಆಟಗಾರರನ್ನು ಆಯ್ಕೆ ಮಾಡಿದ್ದಾರೆ.
ತರಬೇತಿ ಶಿಬಿರ ಜುಲೈ 1ರಿಂದ ಜುಲೈ 20ರ ವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ. ಸುನೀಲ್ ಛೆಟ್ರಿ, ರಾಬಿನ್ ಸಿಂಗ್, ಫ್ರಾನ್ಸಿಸ್ ಫರ್ನಾಂಡೀಸ್ ಸ್ಥಾನ ಪಡೆದ ಮೂವರು ಹಿರಿಯರು. ಇತರರು 23 ವರ್ಷದೊಳಗಿನವರಾಗಿದ್ದಾರೆ.
ಭಾರತ ತಂಡ: ಗೋಲ್ಕೀಪರ್ಸ್- ಅಮರಿಂದರ್, ಗುರಪ್ರೀತ್ ಸಿಂಗ್ ಸಂಧು, ರವಿಕುಮಾರ್, ಕಮಲ್ಜಿತ್. ರಕ್ಷಣೆ- ಪ್ರೀತಂ ಕೊತಾಲ್, ಕೀನನ್ ಅಲ್ಮೇಡಾ, ದೀಪಕ್ ದೇವರಾಣಿ, ಜೆ. ಲಾರೆನ್ಸೊ, ಎಸ್. ಸಂಪಿಂಗಿರಾಜ್, ಸಂದೇಶ್ ಜಿಂಗನ್, ಸಂಜಯ್ ಬಾಲಮುಚು, ಸಲಾಮ್ ಸಿಂಗ್, ನಾರಾಯಣ್ ದಾಸ್, ಶೋವಿಕ್ ಘೋಷ್. ಸಂಪರ್ಕ- ಪ್ರಣಯ್ ಹಾಲ್ದರ್, ರಾಲಿನ್ ಬೋರ್ಜೆಸ್, ಕ್ಲಿಫ್ಟಾನ್ ಡಯಾಸ್, ಆಲ್ವಿನ್ ಜಾರ್ಜ್, ಸಿಯಮ್ ಹಂಗಲ್, ಲಾಲ್ರಿಂಡಿಕಾ ರಾಲ್ಟೆ, ಧನಪಾಲ್ ಗಣೇಶ್, ಮಿಲನ್ ಸಿಂಗ್. ಮುನ್ನಡೆ- ಫ್ರಾನ್ಸಿಸ್ ಫರ್ನಾಂಡೀಸ್, ರೋಮಿಯೊ ಫರ್ನಾಂಡೀಸ್, ಸೀಮಿನ್ಲೆನ್ ಡಾಂಗೆಲ್, ಸುನೀಲ್ ಛೆಟ್ರಿ, ರಾಬಿನ್ ಸಿಂಗ್, ಹಾಕಿಪ್ ಥೋಂಗ್ಕೋಶಿಮ್, ಅಲೇಶ್ ಸಾವಂತ್, ಮಂದಾರ್ ರಾವ್ ದೇಸಾಯಿ.