ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಎಎಸ್ಸಿ ತಂಡಕ್ಕೆ ಮಣಿದ ಎಡಿಇ

Rashmi Kasaragodu
Updated On : 5 Jun 2014, 1:19 am

ಬೆಂಗಳೂರು: ಎಎಸ್ಸಿ ತಂಡದ ಆಟಗಾರರು ರಾಜ್ಯ ಸೂಪರ್ ಡಿವಿಜನ್ ಲೀಗ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ರೋಚಕ ಗೆಲವು ದಾಖಲಿಸಿದ್ದಾರೆ.
ಅಶೋಕನಗರದಲ್ಲಿರುವ ಬೆಂಗಳೂರು ಜಿಲ್ಲಾ ಫುಟ್ಬಾಲ್ ಸಂಸ್ಥೆ ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಎಎಸ್ಸಿ ತಂಡದ ಆಟಗಾರರು 4-1 ಗೋಲುಗಳಿಂದ ಎಡಿಇ ತಂಡವನ್ನು ಪರಾಭವಗೊಳಿಸಿದರು.
ವಿಜೇತ ಎಎಸ್ಸಿ ತಂಡದ ಪರ ಪಿ. ಮಜುಂದಾರ್ 29ನೇ ನಿಮಿಷ, ಅರೋಜ್ ಶೇಖ್ 41ನೇ ನಿಮಿಷ, ಲಾಕ್ಪಾ ತಮಂಗ್ 47ನೇ ನಿಮಿಷ ಮತ್ತು ರಾಜಿಬ್ 78ನೇ ನಿಮಿಷಗಳಲ್ಲಿ ಗೋಲು ಗಳಿಸಿದರು. ಎಡಿಇ ತಂಡದ ಪರ ಕವಿ ಅರಸನ್ ಮಾತ್ರ 9ನೇ ನಿಮಿಷದಲ್ಲಿ ಒಂದು ಗೋಲು ಗಳಿಸಲು ಸಫಲರಾದರು. ಈ ಮಧ್ಯೆ 'ಎ' ಡಿವಿಜನ್ ಲೀಗ್ ಪಂದ್ಯದಲ್ಲಿ ಪೋಸ್ಟಲ್ ತಂಡದ ಆಟಗಾರರು 1-0 ಗೋಲಿನಿಂದ ತಿಲಕ್ ಮೆಮೋರಿಯಲ್ ತಂಡದ ವಿರುದ್ಧ ಗೆಲವಿನ ಕೇಕೆ ಹಾಕಿದರು. ಪಂದ್ಯದ 74ನೇ ನಿಮಿಷದಲ್ಲಿ ಶಲೇನ್ಮಂಗ್ ಗೋಲು ಗಳಿಸಿ ಪೋಸ್ಟಲ್ ತಂಡಕ್ಕೆ ನಿಚ್ಚಳ ಗೆಲವು ತಂದುಕೊಟ್ಟರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement