ಎಲ್ಲರಿಗೂ ಸಮಾನವಕಾಶ
2014ರ ಫೀಫಾ ವಿಶ್ವಕಪ್ ಪಂದ್ಯಾವಳಿಯ ಎಲ್ಲ ಗುಂಪುಗಳಲ್ಲಿ 'ಸಿ' ಗುಂಪು ವಿಭಿನ್ನವಾಗಿ ನಿಲ್ಲುತ್ತದೆ. ಕಾರಣ ಗುಂಪಿನಲ್ಲಿರುವ ...
ಸಿ ಗುಂಪು
2014ರ ಫೀಫಾ ವಿಶ್ವಕಪ್ ಪಂದ್ಯಾವಳಿಯ ಎಲ್ಲ ಗುಂಪುಗಳಲ್ಲಿ 'ಸಿ' ಗುಂಪು ವಿಭಿನ್ನವಾಗಿ ನಿಲ್ಲುತ್ತದೆ. ಕಾರಣ ಗುಂಪಿನಲ್ಲಿರುವ ಕೊಲಂಬಿಯಾ, ಗ್ರೀಸ್, ಐವರಿ ಕೋಸ್ಟ್ ಹಾಗೂ ಜಪಾನ್ ತಂಡಗಳು ಸಮಬಲದ ಹೋರಾಟ ನೀಡುವ ಶಕ್ತಿಯನ್ನು ಹೊಂದಿವೆ. ಇದು ಈ ಗುಂಪಿನಲ್ಲಿ ಯಾವ ತಂಡ ಮೇಲುಗೈ ಪಡೆಯಲಿದೆ ಎಂಬ ಕಾತರ ಮೂಡಿಸಿದೆ. ಏಕೆಂದರೆ ಇಲ್ಲಿ ಎಲ್ಲ ತಂಡಗಳಿಗೂ ಮುಕ್ತ ಅವಕಾಶವಿದೆ. ಆದರೂ ಸಹ ತನ್ನ ಖಂಡದಲ್ಲೇ ಆಡುತ್ತಿರುವ ಮತ್ತು ಆರ್ಹತಾ ಸುತ್ತಿನಲ್ಲಿ ಅದ್ಭುತ ಪ್ರದರ್ಶನ ನೀಡಿದ ಹಾಗೂ ಅರ್ಜೆಂಟೀನಾಕ್ಕಿಂತ ಕೇವಲ 2 ಅಂಕ ಕಡಿಮೆ ಗಳಿಸಿದ ಕೊಲಂಬಿಯಾ ಈ ಗುಂಪಿನಲ್ಲಿ ಬಲಿಷ್ಠ ತಂಡವೆನಿಸಿದೆ.
ಐವರಿ ಕೋಸ್ಟ್
ಕೋಚ್: ಸಬ್ರಿ ಲ್ಯಾಮೋಚಿ
ಸ್ಟಾರ್ ಆಟಗಾರ: ಯಾಯಾ ಟೌರೆ
ಶ್ರೇಷ್ಠ ಪ್ರದರ್ಶನ: 2006, 2010ರಲ್ಲಿ ಗುಂಪು ಹಂತ ಪ್ರವೇಶ-ಡಿಡೀಯರ್ ಡ್ರೋಗ್ಬಾ, ಸಾಲೋಮೊನ್ ಕಾಲೌ, ವೈಲ್ಫ್ರೈಡ್ ಬೋನಿ ಹಾಗೂ ಯಾಯಾ ಟೌರೆ ಅವರು ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗೋಲು ದಾಖಲಿಸಲು ಸಿದ್ಧಹಸ್ತರು.
= ಆಫ್ರಿಕಾ ದೇಶದ ಪರ ಪ್ರಮುಖ ಪಂದ್ಯಾವಳಿಗಳಲ್ಲಿ ಈ ಆಟಗಾರರು ಯಶಸ್ಸು ಕಂಡಿರುವುದು ತುಂಬಾ ಕಡಿಮೆ. = ತಮ್ಮ ಖಂಡದಿಂದ ಹೊರಗೆ ಬಂದಾಗ ಈ ಆಟಗಾರರು ಮಹತ್ವದ ಪ್ರದರ್ಶನ ನೀಡಿದಲ್ಲಿ ತಂಡಕ್ಕೆ ಪಂದ್ಯಾವಳಿಯಲ್ಲಿ ಹೂವಿನ ಹಾದಿಯಾಗಲಿದೆ.
ಪ್ರತಿ ಆಟಗಾರನಿಗೂ ಡ್ರಗ್ಸ್ ಟೆಸ್ಟ್
ಈ ಬಾರಿಯ ವಿಶ್ವಕಪ್ನಲ್ಲಿ ಡ್ರಗ್ಸ್ ಸೇವನೆಯಂತಹ ಪ್ರಕರಣಗಳನ್ನು ತಡೆಯಲು ಫಿಫಾ ಪಣ ತೊಟ್ಟಿದ್ದು, ಟೂರ್ನಿಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಆಟಗಾರನೂ ಡ್ರಗ್ಸ್ ಪರೀಕ್ಷೆಗೆ ಒಳಗಾಗಬೇಕಿದೆ. ಅಲ್ಲದೆ ಆಟಗಾರ ಬಯೋಲಾಜಿಕಲ್ ಪಾಸ್ಪೋರ್ಟ್ ಹೊಂದಬೇಕು ಎದು ಫಿಫಾ ತಿಳಿಸಿದೆ. ಸೈಕ್ಲಿಂಗ್ ಹಾಗೂ ಅಥ್ಲೆಟಿಕ್ಸ್ನಲ್ಲಿ ನೀಡಲಾಗುವ ಈ ರೀತಿಯಾದ ಪಾಸ್ಪೋರ್ಟ್ ಅನ್ನು ಫುಟ್ಬಾಲ್ನಲ್ಲೂ ನೀಡಲು ನಿರ್ಧರಿಸಿದ್ದು, ಆತನ ವೃತ್ತಿಜೀವನದುದ್ದಕ್ಕೂ ಅದನ್ನು ಬಳಸಬಹುದಾಗಿದೆ. ಇದರಲ್ಲಿ ಆಟಗಾರನ ರಕ್ತದ ಗುಂಪು ಹಾಗೂ ರಕ್ತ ಮತ್ತು ಮೂತ್ರ ಪರಿಕ್ಷೆಯ ವಿವರವನ್ನು ನೀಡಲಾಗುತ್ತದೆ. ಈಗಾಗಲೇ ಫುಟ್ಬಾಲ್ ತಾರೆಗಳಾದ ಲಿಯೋನಲ್ ಮೆಸ್ಸಿ, ನೇಮಾರ್, ಆ್ಯಂಡ್ರೆಸ್ ಇನಿಯೆಸ್ಟಾ ಸೇರಿದಂತೆ ಹಲವು ಆಟಗಾರರು ತಮ್ಮ ರಕ್ತ ಮಾದರಿಯನ್ನು ನೀಡಿದ್ದಾರೆ. ನಾವು ಯಾವಾಗ ಬೇಕಾದರೂ, ಯಾರನ್ನು ಬೇಕಾದರು, ಎಷ್ಟು ಸಲ ಬೇಕಾದರೂ ಪರೀಕ್ಷೆಗೆ ಒಳಪಡಿಸುತ್ತೇವೆ ಎಂದು ಫಿಫಾ ವೈದ್ಯಕೀಯ ಮುಖ್ಯ ಅಧಿಕಾರಿ ಜಿರಿ ಡ್ವೊರಕ್ ತಿಳಿಸಿದ್ದಾರೆ.
ಗ್ರೀಸ್
ಕೋಚ್: ಫೆರ್ನಾಂಡೋ ಸ್ಯಾಂಟೋಸ್
ಸ್ಟಾರ್ ಆಟಗಾರ: ಜಾರ್ಜಿಯೋಸ್ ಸಮಾರಸ್
ಶ್ರೇಷ್ಠ ಪ್ರದರ್ಶನ: 1994, 2010ರಲ್ಲಿ ಗುಂಪು ಹಂತ ಪ್ರವೇಶ
ಗ್ರೀಸ್ ಫುಟ್ಬಾಲ್ ತಂಡಕ್ಕೆ ಗೋಲು ಗಳಿಸುವುದೇ ದೊಡ್ಡ ಸಮಸ್ಯೆ.
ಹೀಗಾಗಿ, ತಂಡದ ಪ್ರಮುಖರಾದ ಸಮರಾಸ್ ಹಾಗೂ ಹಿರಿಯ ಆಟಗಾರ ದಿಮಿತ್ರಿಸ್ ಸಾಲ್ಪಿಂಗಿಡೀಸ್ ಅವರ ಮೇಲೆ ಒತ್ತಡ ಹೆಚ್ಚುವ ಸಾಧ್ಯತೆಗಳಿವೆ. -ಅರ್ಹತಾ ಸುತ್ತಿನಲ್ಲಿ ಪಂದ್ಯದ ಕಠಿಣ ಪ್ರದರ್ಶನ ನೀಡಿದಲ್ಲಿ ಎದುರಾಳಿಯನ್ನು ಸಮಸ್ಯೆಯಲ್ಲಿ ಸಿಲುಕಿಸಬಹುದು.
ಸಾಂಘಿಕ ಪ್ರದರ್ಶನ ನೀಡಿದಲ್ಲಿ ಗ್ರೀಸ್ ವಿರುದ್ಧ ಎದುರಾಳಿ ತಂಡ ಪೆಚ್ಚಾಗುವುದರಲ್ಲಿ ಅನುಮಾನವಿಲ್ಲ.
ಕೊಲಂಬಿಯಾ
ಕೋಚ್: ಜೋಸ್ ಪೆಕರ್ಮನ್
ಸ್ಟಾರ್ ಆಟಗಾರ: ರಾಡಾಮೆಲ್ ಫಾಲ್ಕೋ
ಶ್ರೇಷ್ಠ ಪ್ರದರ್ಶನ: 1990ರಲ್ಲಿ ಅಂತಿಮ 16ರ ಘಟ್ಟ ಪ್ರವೇಶ-ದಕ್ಷಿಣ ಅಮೆರಿಕದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆಡಿದ ಕೊಲಂಬಿಯಾ ಅತ್ಯುತ್ತಮ ಅವಕಾಶವನ್ನು ಹೊಂದಿದೆ. ತಂಡದಲ್ಲಿ ಫಾಲ್ಕೋ ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. ಗೋಲು ಗಳಿಸುವುದಕ್ಕಾಗಿಯೇ ಹುಟ್ಟಿರುವಂತೆ ಅಭಿಮಾನಿಗಳ ಕಣ್ಣಿಗೆ ರಾಚುತ್ತಿದ್ದಾರೆ. -ಅಲ್ಲದೆ, ಜೇಮ್ಸ್ ರೊಡ್ರಿಗೆಜ್ ಸಹ ತಂಡಕ್ಕೆ ಆಸರೆಯಾಗುವ ಆಟಗಾರ ಎನಿಸಿದ್ದಾರೆ. ಹೀಗಾಗಿ ಕೊಲಂಬಿಯಾ ಈ ಪಂದ್ಯಾವಳಿಯಲ್ಲಿ ಈ ಹಿಂದೆಂದಿಗಿಂತಲೂ ಶ್ರೇಷ್ಠ ಪ್ರದರ್ಶನ ಮೆರೆಯಬಹುದು.
ಜಪಾನ್
ಕೋಚ್: ಅಲ್ಬರ್ಟೋ ಜಕ್ಕೆರೋನಿ
ಸ್ಟಾರ್ ಆಟಗಾರ: ಕೇಸುಕೆ ಹೊಂಡಾ
ಶ್ರೇಷ್ಠ ಪ್ರದರ್ಶನ: 2002, 2010ರಲ್ಲಿ ಅಂತಿಮ 16ರ ಘಟ್ಟ ಪ್ರವೇಶ.-ಪ್ರಮುಖ ಆಟಗಾರ ಜಕ್ಕೆರೋನಿ ತಂಡವನ್ನು ಬಲಿಷ್ಠವನ್ನಾಗಿಸಿದ್ದಾರೆ. ಆದರೆ, ಕಳೆದ ಬೇಸಿಗೆಯಲ್ಲಿ ನಡೆದ ಕನ್ಫೆಡರೇನ್ಸ್ ಕಪ್ ಆಡಿದ ಮೂರು ಪಂದ್ಯಗಳಲ್ಲಿ ಜಪಾನ್ ಸೋಲನುಭವಿಸಿತ್ತು. ಇದು ಜಪಾನ್ ವಿಶ್ವಕಪ್ನಲ್ಲಿ ಯಾವ ರೀತಿ ಪ್ರದರ್ಶನ ನೀಡಲಿದೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.