ಪ್ರತಿ ಆಟಗಾರನಿಗೂ ಡ್ರಗ್ಸ್ ಟೆಸ್ಟ್
ಈ ಬಾರಿಯ ವಿಶ್ವಕಪ್ನಲ್ಲಿ ಡ್ರಗ್ಸ್ ಸೇವನೆಯಂತಹ ಪ್ರಕರಣಗಳನ್ನು ತಡೆಯಲು ಫಿಫಾ ಪಣ ತೊಟ್ಟಿದ್ದು, ಟೂರ್ನಿಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಆಟಗಾರನೂ ಡ್ರಗ್ಸ್ ಪರೀಕ್ಷೆಗೆ ಒಳಗಾಗಬೇಕಿದೆ. ಅಲ್ಲದೆ ಆಟಗಾರ ಬಯೋಲಾಜಿಕಲ್ ಪಾಸ್ಪೋರ್ಟ್ ಹೊಂದಬೇಕು ಎದು ಫಿಫಾ ತಿಳಿಸಿದೆ. ಸೈಕ್ಲಿಂಗ್ ಹಾಗೂ ಅಥ್ಲೆಟಿಕ್ಸ್ನಲ್ಲಿ ನೀಡಲಾಗುವ ಈ ರೀತಿಯಾದ ಪಾಸ್ಪೋರ್ಟ್ ಅನ್ನು ಫುಟ್ಬಾಲ್ನಲ್ಲೂ ನೀಡಲು ನಿರ್ಧರಿಸಿದ್ದು, ಆತನ ವೃತ್ತಿಜೀವನದುದ್ದಕ್ಕೂ ಅದನ್ನು ಬಳಸಬಹುದಾಗಿದೆ. ಇದರಲ್ಲಿ ಆಟಗಾರನ ರಕ್ತದ ಗುಂಪು ಹಾಗೂ ರಕ್ತ ಮತ್ತು ಮೂತ್ರ ಪರಿಕ್ಷೆಯ ವಿವರವನ್ನು ನೀಡಲಾಗುತ್ತದೆ. ಈಗಾಗಲೇ ಫುಟ್ಬಾಲ್ ತಾರೆಗಳಾದ ಲಿಯೋನಲ್ ಮೆಸ್ಸಿ, ನೇಮಾರ್, ಆ್ಯಂಡ್ರೆಸ್ ಇನಿಯೆಸ್ಟಾ ಸೇರಿದಂತೆ ಹಲವು ಆಟಗಾರರು ತಮ್ಮ ರಕ್ತ ಮಾದರಿಯನ್ನು ನೀಡಿದ್ದಾರೆ. ನಾವು ಯಾವಾಗ ಬೇಕಾದರೂ, ಯಾರನ್ನು ಬೇಕಾದರು, ಎಷ್ಟು ಸಲ ಬೇಕಾದರೂ ಪರೀಕ್ಷೆಗೆ ಒಳಪಡಿಸುತ್ತೇವೆ ಎಂದು ಫಿಫಾ ವೈದ್ಯಕೀಯ ಮುಖ್ಯ ಅಧಿಕಾರಿ ಜಿರಿ ಡ್ವೊರಕ್ ತಿಳಿಸಿದ್ದಾರೆ.