ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಸೆಮಿಫೈನಲ್ಗೆ ಜೋಕೊವಿಚ್

ವಿಶ್ವದ ಎರಡನೇ ರ್ಯಾಂಕಿಂಗ್ನ ಸರ್ಬಿಯಾದ ಟೆನಿಸ್ ತಾರೆ ನೊವಾಕ್ ಜೋಕೊವಿಚ್, ತಮ್ಮ ಗೆಲವಿನ ...

Rashmi Kasaragodu
Updated On : 5 Jun 2014, 1:18 am

ಪ್ಯಾರಿಸ್: ವಿಶ್ವದ ಎರಡನೇ ರ್ಯಾಂಕಿಂಗ್ನ ಸರ್ಬಿಯಾದ ಟೆನಿಸ್ ತಾರೆ ನೊವಾಕ್ ಜೋಕೊವಿಚ್, ತಮ್ಮ ಗೆಲವಿನ ಹಾದಿಯಲ್ಲಿ ಮುಂದುವರಿದಿದ್ದು, ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯ ಉಪಾಂತ್ಯಕ್ಕೆ ಪ್ರವೇಶಿಸಿದ್ದಾರೆ.
ಮಂಗಳವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಜೋಕೊವಿಚ್ ತಮ್ಮ ಎದುರಾಳಿ ಕೆನಡಾದ ಮಿಲೊಸ್ ರೊನಿಕ್ ವಿರುದ್ಧ ಹೋರಾಟದ ಗೆಲವು ದಾಖಲಿಸಿದರು.
8ನೇ ರ್ಯಾಕಿಂಗ್ನ ರೊನಿಕ್ ಅವರಿಂದ ಜೋಕೊವಿಚ್ ತೀವ್ರ ಪೈಪೋಟಿ ಎದುರಿಸಿದ ಪರಿಣಾಮ, ನೊವಾಕ್ 7-5, 7-6 (7-5), 6-4 ಸೆಟ್ಗಳ ಅಂತರದಲ್ಲಿ ಗೆಲವು ದಾಖಲಿಸಿದರು.
ಆರಂಭದಿಂದಲೇ ಇಬ್ಬರು ಆಟಗಾರರ ನಡುವೆ ಪ್ರಬಲ ಪೈಪೋಟಿ ಎದುರಾಯಿತು. ಆದರೂ ತಮ್ಮ ನಿಯಂತ್ರಣ ಕಳೆದುಕೊಳ್ಳದ ಜೋಕೊವಿಚ್ ಪಂದ್ಯದಲ್ಲಿ ಗೆಲವು ದಾಖಲಿಸುವಲ್ಲಿ ಯಶಸ್ವಿಯಾದರು.
ಮೊದಲ ಸೆಟ್ನಲ್ಲಿ ಜೋಕೊ 7-5 ಅಂತರದಲ್ಲಿ ಮುನ್ನಡೆ ಪಡೆದರು. ನಂತರ ಎರಡನೇ ಸೆಟ್ನಲ್ಲಿ ಇವರಿಬ್ಬರ ನಡುವಣ ಕಾದಾಟ ಮತ್ತಷ್ಟು ತೀವ್ರಗೊಂಡಿತು ಪರಿಣಾಮ ಜೋಕೊ 7-6 (7-5) ಮೇಲುಗೈ ಸಾಧಿಸಲು ಪ್ರಯಾಸ ಪಟ್ಟರು. ಇನ್ನು ಅಂತಿಮ ಸೆಟ್ನಲ್ಲಿ 6-4 ಅಂತರ ಕಾಯ್ದುಕೊಂಡ ಜೋಕೊ ಪಂದ್ಯವನ್ನು ವಶಕ್ಕೆ ತೆಗೆದುಕೊಂಡರು.
ಮತ್ತೊಂದು ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಜೆಕ್ ಗಣರಾಜ್ಯದ ಥಾಮಸ್ ಬೆರ್ಡಿಚ್ ತಮ್ಮ ಎದುರಾಳಿ ಲಾಟ್ವಿಯಾದ ಎರ್ನೆಸ್ಟ್ ಗುಲ್ಬಿಸ್ ವಿರುದ್ಧ 3-6, 2-6, 4-6 ಸೆಟ್ಗಳ ಅಂತರದಲ್ಲಿ ಪರಾಭವಗೊಂಡರು.
ಇನ್ನು ಮಹಿಳೆಯ ಸಿಂಗಲ್ಸ್ನ ಎರಡನೇ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಕೆನಡಾದ ಯುಗೆನಿ ಬುಚರ್ಡ್ ತಮ್ಮ ಎದುರಾಳಿ ಸ್ಪೇನ್ನ ಕ್ಲಾರಾ ನವಾರ್ರೊ ವಿರುದ್ಧ 7-6 (7-4), 2-6, 7-5 ಸೆಟ್ಗಳ ಅಂತರದಲ್ಲಿ ಗೆಲವು ದಾಖಲಿಸಿ ಉಪಾಂತ್ಯಕ್ಕೆ ಪ್ರವೇಶಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement