ಖಿನ್ನತೆ: ವಿದಾಯ ಹೇಳಿದ ಪೊಮರ್ಸ್
ಬ್ರಿಸ್ಬೇನ್: ಆಸ್ಟ್ರೇಲಿಯಾದ ಸ್ಫೋಟಕ ಟಿ20 ಬ್ಯಾಟ್ಸ್ಮನ್ ಲೂಕ್ ಪೊಮರ್ಸ್ಬ್ಯಾಚ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಗೆ ವಿದಾಯ ಹೇಳಿದ್ದಾರೆ.
ಖಿನ್ನತೆಯಿಂದ ಬಳಲುತ್ತಿರುವುದೇ ಪೊಮರ್ಸ್ಬ್ಯಾಚ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಲು ಪ್ರಮುಖ ಕಾರಣವಂತೆ. ಪೊಮರ್ಸ್ಬ್ಯಾಚ್ 2007ರಲ್ಲಿ ಆಸ್ಟ್ರೇಲಿಯಾ ಪರ ಒಂದೇ ಒಂದು ಟಿ20 ಪಂದ್ಯವನ್ನಾಡಿದ್ದಾರೆ. ಆದರೆ, ಐಪಿಎಲ್ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಯ್ಕೆಯಾಗಿದ್ದು, ಅವರ ಸ್ಫೋಟಕ ಬ್ಯಾಟಿಂಗ್ ಸಾಮರ್ಥ್ಯಕ್ಕೆ ಹಿಡಿದ 0ಕನ್ನಡಿಯಾಗಿದೆ.