ಗೋಲು ದಾಖಲಿಸಿದ ಹಿರಿಯ
1994ರ ವಿಶ್ವಕಪ್ ಪಂದ್ಯಾವಳಿಯಲ್ಲಿ ಕೆಮರೂನ್ ತಂಡದ ರೋಜರ್ ಮಿಲ್ಲಾ, ರಷ್ಯಾ ವಿರುದ್ಧದ ಪಂದ್ಯದಲ್ಲಿ ಗೋಲು ದಾಖಲಿಸಿದರು. ಮಿಲ್ಲಾ ತಮ್ಮ 42ನೇ ವಯಸ್ಸಿನಲ್ಲಿ ಗೋಲು ದಾಖಲಿಸುವ ಮೂಲಕ, ವಿಶ್ವಕಪ್ನಲ್ಲಿ ಗೋಲು ದಾಖಲಿಸಿದ ಅತ್ಯಂತ ಹಿರಿಯ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಫೈನಲ್ನಲ್ಲಿ ಹೆಚ್ಚಿನ ಗೋಲು
ಬ್ರೆಜಿಲ್ನ ಮಾಜಿ ಆಟಗಾರ ರೊನಾಲ್ಡೊ, 1998ರಿಂದ 2006ರ ವಿಶ್ವಕಪ್ನ ಫೈನಲ್ ಪಂದ್ಯ ಸೇರಿದಂತೆ ಒಟ್ಟು 15 ಗೋಲು ದಾಖಲಿಸಿದ್ದಾರೆ. ಈ ಮೂಲಕ ವಿಶ್ವಕಪ್ ಫೈನಲ್ ಪಂದ್ಯಗಳಲ್ಲಿ ಅತಿ ಹೆಚ್ಚು ಗೋಲು ದಾಖಲಿಸಿದ ಆಟಗಾರನಾಗಿದ್ದಾರೆ.
ಬದಲಾದ ಟ್ರೋಫಿ
ಆರಂಭದಲ್ಲಿ ಫಿಫಾ ವಿಶ್ವಕಪ್ನಲ್ಲಿ ವಿಕ್ಟೋರಿಯಾ ಎಂಬ ಟ್ರೋಫಿಯನ್ನು ಬಳಸಲಾಗುತಿತ್ತು. ನಂತರ ಅದಕ್ಕೆ ಫಿಫಾ ಮಾಜಿ ಅಧ್ಯಕ್ಷ ಜೂಲಿಸ್ ರಿಮೆಟ್ ಎಂದು ನಾಮಕರಣ ಮಾಡಲಾಯಿತು. ನಂತರ ಬ್ರೆಜಿಲ್ 1970ರಲ್ಲಿ ಮೂರನೇ ಬಾರಿಗೆ ವಿಶ್ವಕಪ್ ಗೆದ್ದ ನಂತರ ಈ ವಿಶ್ವಕಪ್ ಅನ್ನು ಬ್ರೆಜಿಲ್ ಹೊಂದಲು ಅನುಮತಿ ನೀಡಲಾಯಿತು. ನಂತರ ಹೊಸ ವಿನ್ಯಾಸದ ಟ್ರೋಫಿಯನ್ನು ಪರಿಚಯಿಸಿ ಫಿಫಾ ಟ್ರೋಫಿ ಎಂದು ನಾಮಕರಣ ಮಾಡಲಾಯಿತು. ಈ ಟ್ರೋಫಿಯ ವಿನ್ಯಾಸಕ್ಕೆ 7 ದೇಶಗಳಿಂದ ಒಟ್ಟು 52 ವಿನ್ಯಾಸವನ್ನು ಆಯ್ಕೆ ಮಾಡಿ ನಂತರ ಅಂತಿಮ ವಿನ್ಯಾಸವನ್ನು ನಿರ್ಧರಿಸಿತು. ಇದು 36.5 ಸೆ.ಮೀ (14.4 ಇಂಚು) ಉದ್ದವಿದೆ. ಟ್ರೋಫಿಯಲ್ಲಿ 18 ಕ್ಯಾರೆಟ್ನ 5 ಕೆಜಿ ಚಿನ್ನವನ್ನು ಬಳಸಲಾಗಿದೆ. ಒಟ್ಟಾರೆಯಾಗಿ ಈ ಟ್ರೋಫಿ 70-80 ಕೆ.ಜಿ ತೂಕವಿದೆ.
ಅತಿ ಹೆಚ್ಚು ಗೋಲ್ ವೀರ
ಫ್ರಾನ್ಸ್ನ ಮಾಜಿ ಆಟಗಾರ ಜಸ್ಟ್ ಫಾಂಟೈನ್ 1958ರ ಫಿಫಾ ವಿಶ್ವಕಪ್ನಲ್ಲಿ 13 ಗೋಲು ದಾಖಲಿಸಿದ್ದು, ವಿಶ್ವಕಪ್ ಆವೃತ್ತಿವೊಂದರಲ್ಲಿ ಅತಿ ಹೆಚ್ಚು ಗೋಲು ದಾಖಲಿಸಿದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.