ಭಾರತ- ಪಾಕಿಸ್ತಾನ ನಡುವೆ ಬೆಂಗಳೂರಲ್ಲಿ ಫುಟ್ಬಾಲ್ ಪಂದ್ಯ
ನವದೆಹಲಿ: ಭಾರತದ 23 ವರ್ಷದೊಳಗಿನವರ ಫುಟ್ಬಾಲ್ ತಂಡ ಬರುವ ಆಗಸ್ಟ್ನಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಬೆಂಗಳೂರಿನಲ್ಲಿ ಎರಡು ಸೌಹಾರ್ದ ಪಂದ್ಯಗಳನ್ನಾಡಲಿದೆ.
ಮುಂಬರುವ ಇಂಚಾನ್ ಏಷ್ಯನ್ ಗೇಮ್ಸ್ ಹಿನ್ನೆಲೆಯಲ್ಲಿ ಭಾರತ ತಂಡದ ಆಟಗಾರರು ಆಗಸ್ಟ್ 17 ಮತ್ತು 20ರಂದು ಈ ಪಂದ್ಯಗಳನ್ನಾಡಲಿದ್ದಾರೆ ಎಂದು ಅಖಿಲ ಭಾರತ ಫುಟ್ಬಾಲ್ ಒಕ್ಕೂಟ ತಿಳಿಸಿದೆ.
ಈಗಾಗಲೇ ಬೆಂಗಳೂರಿನಲ್ಲಿ ಜುಲೈ 1ರಿಂದ ನಡೆಯಲಿರುವ ತರಬೇತಿ ಶಿಬಿರಕ್ಕಾಗಿ 30 ಸದಸ್ಯರ ಭಾರತ ತಂಡವನ್ನು ಆಯ್ಕೆ ಮಾಡಲಾಗಿದೆ.