ಡ್ರೊನೆಸ್ ಮತ್ತು ರೊಬೋಟ್ ಬಳಕೆ
2014ರ ಫಿಫಾ ವಿಶ್ವಕಪ್ಗೆ ಭದ್ರತೆ ಪ್ರಮುಖ ಆದ್ಯತೆಯಾಗಿದ್ದು, ಈ ಬಾರಿ ತಂತ್ರಜ್ಞಾನದ ಸಹಾಯದಿಂದ ಭದ್ರತಾ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಪಂದ್ಯದ ವೇಳೆ ಅಭಿಮಾನಿಗಳು ಹಾಗೂ ಅವರ ಭದ್ರತಾ ವ್ಯವಸ್ಥೆಯ ಮೇಲೆ ಹದ್ದಿನ ಕಣ್ಣಿಡಲು ಇಸ್ರೆಲ್ನಲ್ಲಿ ಸಿದ್ಧಪಡಿಸಲಾಗಿರುವ ಡ್ರೊನೆಸ್ ಅನ್ನು ಬಳಸಲಾಗಿದ್ದು, ಇದರ ಜತೆಗೆ 'ಐ ರೊಬೋಟ್' ಎಂದು ಕರೆಯಲಾಗುವ ಪ್ಯಾಕ್ಬೋಟ್ 510 ಎಂಬ ರೊಬೋಟ್ ಅನ್ನು ಬಳಸಲಾಗುತ್ತಿದೆ. ಈ ರೊಬೋಟ್ಗಳನ್ನು ಹಲವಾರು ಮಾದರಿಯ ಕಾರ್ಯಚರಣೆಗೆ ಸಹಾಯವಾಗುವಂತೆ ವಿನ್ಯಾಸ ಮಾಡಿ ನಿರ್ಮಿಸಲಾಗಿದೆ.