ನೆರೆದವರಿಗೆ ನಾಚಿಕೆ, ಹೊಟ್ಟೆಕಿಚ್ಚು ಹುಟ್ಟಿಸುವಂಥ ಘಟನೆ ಇತ್ತೀಚೆಗೆ ಇಂಗ್ಲೆಂಡ್ನ ವೆಂಬ್ಲೆಯಲ್ಲಿ ನಡೆದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ನಡೆಯಿತು. ಸುಮಾರು 80,000 ಪ್ರೇಕ್ಷಕರು ಅಲ್ಲಿದ್ದರು.
ಬಾಕ್ಸಿಂಗ್ನಲ್ಲಿ ಗೆದ್ದ ಕಾರ್ಲ್ ಫ್ರೋಚ್, ತಮ್ಮ ಗೆಳತಿಯನ್ನು ವಿವಾಹವಾಗುವಂತೆ ಪ್ರಸ್ತಾಪಿಸಿದರು. ತಕ್ಷಣ ಅಲ್ಲೇ ಇದ್ದ ಅವರ ರೂಪದರ್ಶಿ ಮತ್ತು ಗೆಳತಿ ರಿಚೆಲ್ ಕಾರ್ಡಿಂಗ್ಲೆ ಬ್ಕಾಕ್ಸಿಂಗ್ ರಿಂಗ್ಗೆ ಧಾವಿಸಿ, ಪ್ರಿಯತಮನನ್ನು ಆಲಂಗಿಸಿಕೊಂಡು ಅಚ್ಚರಿ ಮೂಡಿಸಿದರು. ಬಾಕ್ಸಿಂಗ್ ರಿಂಗ್ನಲ್ಲಿ ಆ ಜೋಡಿಯ ನಡುವೆ ನಡೆದ ರೊಮ್ಯಾನ್ಸನ್ನು ಕಂಡ ಕೆಲವರು ಇದೂ ಒಂಥರ 'ಪಂಚ್' ಅಂತ ನಕ್ಕರಂತೆ!